
ಶಿವಮೊಗ್ಗ: ಅಡಿಕೆ ಕೊಯ್ಲು ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ.
40 ವರ್ಷದ ಶಿವಕುಮಾರ್ ಮೃತಪಟ್ಟವರು. ಗ್ರಾಮದ ಅಡಿಕೆ ತೋಟದಲ್ಲಿ ಶನಿವಾರ ಮರದಿಂದ ಹಸಿ ಅಡಿಕೆ ಕೊಯ್ಲು ಮಾಡುವಾಗ ಆಕಸ್ಮಿಕವಾಗಿ ಅಡಿಕೆ ದೋಟಿ ವಿದ್ಯುತ್ ತಂತಿಗೆ ತಗಲಿದೆ.
ಅನೇಕ ವರ್ಷಗಳಿಂದ ಅಡಿಕೆ ಕೆಲಸ ಮಾಡುತ್ತಿದ್ದ ಅವರು ಮಲ್ಲಿಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಅಡಿಕೆ ಕೆಲಸಕ್ಕೆ ಹೋಗುತ್ತಿದ್ದರು. ಶನಿವಾರ ಅಡಿಕೆ ಕೊಯ್ಲು ವೇಳೆ ಮೇಲಿದ್ದ ವಿದ್ಯುತ್ ತಂತಿಗೆ ದೋಟಿ ತಗುಲಿ ದುರಂತ ಸಂಭವಿಸಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಕುರುವ ಗ್ರಾಮದ ಶಿವಕುಮಾರ್ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.