ಮಂಗಳೂರು: ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತಲೆ ಮೇಲೆ ಹಲಸಿನ ಹಣ್ಣು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಜೂನ್ 23 ರಂದು ಭಾನುವಾರ ಸಂಜೆ ದಕ್ಷಿಣ ಕನ್ನಡದ ಬಂಟ್ವಾಳದ ವಿಟ್ಲ ಕಸಬಾ ಗ್ರಾಮದಲ್ಲಿ ನಡೆದಿದೆ.
ದಾಸರಬೆಟ್ಟು ನಿವಾಸಿ ಕಾಶ್ಮೀರ್ ಡಿಸೋಜ(80) ಮೃತಪಟ್ಟವರು. ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಹಲಸಿನ ಹಣ್ಣು ಮರದ ಮೇಲಿಂದ ತಲೆ ಮೇಲೆ ಬಿದ್ದು ಮೃತಪಟ್ಟಿದ್ದಾರೆ. ಹಲಸಿನ ಹಣ್ಣು ತಲೆ ಮೇಲೆ ಬಿದ್ದ ರಭಸಕ್ಕೆ ಮೂಗಿನಲ್ಲಿ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾರೆ.