ವ್ಯಕ್ತಿಯೊಬ್ಬ 14 ವರ್ಷಗಳ ಬಳಿಕ ಕೆಲಸದ ಅಪ್ಲಿಕೇಷನ್ ವಾಪಸ್ ಪಡೆಯಲು ಕಂಪನಿಗೆ ಕಾಲ್ ಮಾಡಿ ಗಾಬರಿ ಬೀಳಿಸಿದ ಪ್ರಸಂಗ ನಡೆದಿದೆ.
ಕಂಪನಿಗಳಲ್ಲಿ ‘ಜಾಬ್ ಗೋಸ್ಟ್’ ಸಾಮಾನ್ಯವಾಗಿ ಬಳಕೆಯಲ್ಲಿರುವ ಕ್ರಿಯೆ. ಕಂಪನಿಯ ನೇಮಕ ಪ್ರಕ್ರಿಯೆ ವೇಳೆ ಅಥವಾ ಕೆಲಸಕ್ಕೆ ಸೇರಿದ ಕೆಲವು ಗಂಟೆಗಳ ತರುವಾಯ ಗೈರಾಗಿ ಏಕಾಏಕಿ ಮೌನಕ್ಕೆ ಶರಣಾಗಿ ಸಂವಹನ ನಡೆಸದೇ ಆ ಕಂಪನಿ ಪಾಲಿಗೆ ಅಜ್ಞಾತವಾಗಿ ಬಿಡುವವರೂ ಇದ್ದಾರೆ. ಇನ್ನು ಕಂಪನಿಗಳು ಸಹ ಅರ್ಜಿ ಹಾಕಿದವನಿಗೆ ಉತ್ತರಿಸದೇ ಬಹುಕಾಲ ಸತಾಯಿಸುವುದುಂಟು.
ಇಲ್ಲೊಬ್ಬ ಟಿಕ್ಟಾಕ್ ಸ್ಟಾರ್ 14 ವರ್ಷಗಳ ಬಳಿಕ ತನ್ನ ಅರ್ಜಿ ಹಿಂಪಡೆಯಲು ನಿರ್ಧರಿಸಿದ. ಆತ 2008 ರಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ಸ್ಥಿತಿಯ ಬಗ್ಗೆ ಯಾವುದೇ ಅಪ್ಡೇಟ್ ಪಡೆದಿಲ್ಲ.
ಆದರೆ, ಅರ್ಜಿ ಹಿಂಪಡೆಯಲು ನಿರ್ಧರಿಸಿ ಆ ಕಂಪನಿಗೆ ಕರೆ ಮಾಡಿದ್ದು, ಕಂಪನಿ ಪ್ರತಿನಿಧಿಯೊಂದಿಗಿನ ಸ್ವಾರಸ್ಯಕರ ಚರ್ಚೆಯ ವಿಡಿಯೋವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಮೊದಲು ಆತ ಕರೆ ಮಾಡಿ ತನ್ನ ಅರ್ಜಿಯನ್ನು ಹಿಂಪಡೆಯಲು ಬಯಸುವುದಾಗಿ ಕಂಪನಿ ಪ್ರತಿನಿಧಿಗೆ ತಿಳಿಸುತ್ತಾನೆ. “ಸರಿ, ಚಿಂತಿಸಬೇಡಿ, ಇದು ಯಾವುದಕ್ಕೆ ?” ಕಂಪನಿಯ ಪ್ರತಿನಿಧಿ ಫೋನ್ ನಲ್ಲಿ ಉತ್ತರಿಸುತ್ತಾನೆ. ‘ಫ್ರಂಟ್ ಹೋಮ್ ಮ್ಯಾನೇಜರ್’ ಪೋಸ್ಟ್ಗೆ ಅರ್ಜಿ ಹಾಕಿದ್ದಾಗಿ ಈತ ಮರು ಉತ್ತರ ನೀಡುತ್ತಾನೆ.
ಅರ್ಜಿಯನ್ನು ಪತ್ತೆಹಚ್ಚಲು ಸಾಧ್ಯವಾಗದ ಕಂಪನಿಯ ಪ್ರತಿನಿಧಿಯು ಯಾವಾಗ ಅರ್ಜಿ ಸಲ್ಲಿಸಿದ್ದನೆಂದು ಹೇಳಲು ಕಂಪನಿ ಪ್ರತಿನಿಧಿ ಸೂಚಿಸುತ್ತಾನೆ.
“ನಾನು 2008ರಲ್ಲಿ ಅರ್ಜಿ ಸಲ್ಲಿಸಿದ್ದೆ. ಎಂದಿಗೂ ರಿಪ್ಲೇ ಬಂದಿಲ್ಲ. ನೀವು ಯಾರನ್ನು ನೇಮಿಸಿಕೊಳ್ಳಬೇಕೆಂದು ಇನ್ನೂ ನಿರ್ಧರಿಸುತ್ತೀದ್ದಿರಿ ಎಂದು ನಾನು ಭಾವಿಸಿದ್ದೆ. ಹೊಸ ಉದ್ಯೋಗವನ್ನು ಪಡೆದಿದ್ದು, ತನ್ನ ಅಜಿರ್ಯನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಈತ ಹೇಳಿದಾಗ ಕಂಪನಿ ಪ್ರತಿನಿಧಿ ಬೇಸ್ತು ಬಿದ್ದಿದ್ದ.
ಆ ಉತ್ತರದಿಂದ ಆಘಾತಕ್ಕೊಳಗಾದ ಕಂಪನಿ ಪ್ರತಿನಿಧಿ, 2008? ನೀವು ಡ್ರಗ್ಸ್ ಸೇವಿಸಿದ್ದೀರಾ? ಎಂದು ಪ್ರಶ್ನೆ ಹಾಕುತ್ತಾನೆ.
ಆ ವ್ಯಕ್ತಿಯ ಸ್ವೀಟ್ ರಿವೇಂಜ್ಗೆ ಕಾಮೆಂಟ್ಗಳ ಪ್ರವಾಹದ ಜೊತೆಗೆ 5 ಮಿಲಿಯನ್ ವೀಕ್ಷಣೆ ಗಳಿಸಿದೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಅನೇಕರು ಇದೇ ರೀತಿಯ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ.