ಹಲವು ದಶಕದ ಹಿಂದೆಯೇ ಮೃತನಾದನೆಂದು ಇಡೀ ಗ್ರಾಮ ಭಾವಿಸಿದ್ದ ವ್ಯಕ್ತಿ ದಿಢೀರ್ ಎಂದು ಕುಟುಂಬದ ಎದುರು ಪ್ರತ್ಯಕ್ಷನಾಗಿ ಅಚ್ಚರಿಗೆ ಕಾರಣನಾದ ಘಟನೆಯೊಂದು ನಡೆದಿದೆ.
ಉತ್ತರಾಖಂಡ್‌ನ ಅಲ್ಮೋರಾ ಜಿಲ್ಲೆಯ ರಾಣಿಖೇತ್ ಪ್ರದೇಶದ ನಿವಾಸಿ ಮಾಧೋ ಸಿಂಗ್ ಮೆಹ್ರಾ ಎಂಬಾತನಿಗೆ ಈಗ 72 ವರ್ಷ. ಆತನ ಕುಟುಂಬದ ಪ್ರಕಾರವೇ ಮಾಧೋ 24 ವರ್ಷಗಳ ಹಿಂದೆ ಮೃತನಾಗಿದ್ದಾನೆ.
ಅವರದ್ದು ಸಣ್ಣ ಕುಟುಂಬವಾಗಿದ್ದು, ವಿವಾದದಿಂದಾಗಿ 48 ವರ್ಷದವನಿದ್ದಾಗ ಆತ ದೂರ ಹೋಗಿದ್ದ. ನಾಪತ್ತೆಯಾದ ನಂತರ ಕುಟುಂಬವು 10 ವರ್ಷ ಕಾಯ್ದಿತ್ತು. ನಂತರ ಊರಿನ ಧಾರ್ಮಿಕ ಮುಖ್ಯಸ್ಥ ಆತ ಸತ್ತನೆಂದು ಘೋಷಿಸಿದ್ದನು. ಅಂತಿಮ ಕ್ರಿಯೆಗಳು ನಡೆದಿದ್ದವು.
BIG NEWS: ‘ಕಾವೇರಿ’ಯಲ್ಲಿ ಗರಿಗೆದರಿದ ರಾಜಕೀಯ; ಸಿಎಂ ನಿವಾಸಕ್ಕೆ ದೌಡಾಯಿಸಿದ ಆಪ್ತ ಸಚಿವರು, ಶಾಸಕರು
ಶನಿವಾರ ಮಾಧೋ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅವನನ್ನು ಪಲ್ಲಕ್ಕಿಯಲ್ಲಿ ಮನೆಗೆ ಕರೆತಂದರು ಮತ್ತು ಧಾರ್ಮಿಕ ಮುಖ್ಯಸ್ಥ ತಕ್ಷಣವೇ ಆಗಮಿಸಿ
ಸಮಾಲೋಚಿಸಿದರು.
ಮಾಧೋ ಅಂತಿಮ ವಿಧಿಗಳನ್ನು ಮಾಡಿದ ಕಾರಣ, ಮೊದಲು ಹೊಸದಾಗಿ ನಾಮಕರಣ ಮಾಡಿ ಹೆಸರಿಸುವ ಸಮಾರಂಭವನ್ನು ನಡೆಸಲು ಸೂಚಿಸಿದರು. ಬಳಿಕವಷ್ಟೇ ಅವನನ್ನು ಮನೆಯೊಳಗೆ ಸ್ವಾಗತಿಸಲಾಗುತ್ತದೆ. ಸದ್ಯಕ್ಕೆ, ಅವನಿಗೆ ಉಳಿದುಕೊಳ್ಳಲು ಅಂಗಳದಲ್ಲಿ ಟೆಂಟ್ ಹಾಕಲಾಗಿದೆ.
ಮಾಧೋ ಪತ್ನಿ ಇಷ್ಟು ವರ್ಷ ವಿಧವೆಯಾಗಿ ಜೀವನ ಸಾಗಿಸಿದ್ದಾರೆ. ಹಾಗೂ ಮಗ ಮತ್ತು ಮಗಳಿಗೆ ಮದುವೆ ಮಾಡಿದ್ದಾರೆ.