ಫೇಸ್ಬುಕ್‌ನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ರ ನಕಲಿ ಪ್ರೊಫೈಲ್ ಸೃಷ್ಟಿಸಿ, ಜನರಿಂದ ದುಡ್ಡು ಕೀಳಲು ಯತ್ನಿಸಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಶಕೀರ್ ಹೆಸರಿನ ಈತ ಅನೇಕ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಹೆಸರಿನಲ್ಲಿ ಹುಸಿ ಖಾತೆ ಸೃಷ್ಟಿಸಿ ಜನರಿಗೆ ದುಡ್ಡು ಕೇಳುತ್ತಿದ್ದ ಎಂದು ಗೋವಾ ಕ್ರೈಂ ಬ್ರಾಂಚ್ ಪೊಲೀಸ್ ಪ್ರಕಟಣೆಯಿಂದ ತಿಳಿದುಬಂದಿದೆ. ಹರಿಯಾಣಾ ಹಾಗೂ ಉತ್ತರ ಪ್ರದೇಶ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಗೋವಾ ಪೊಲೀಸರು ಮಥುರಾದಲ್ಲಿ ಶಕೀರ್‌ನನ್ನು ಬಂಧಿಸಿ ಆತನಿಂದ 200 ಸಿಮ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಾದಾಮಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದ ಸಿದ್ದರಾಮಯ್ಯಗೆ ಬಿಗ್ ಶಾಕ್…?
ಮುಖ್ಯಮಂತ್ರಿ ಸಾವಂತ್ ಹೆಸರಿನ ಈ ಹುಸಿ ಖಾತೆ ಮೂಲಕ ಜನರಿಗೆ ಫೇಸ್ಬುಕ್‌ನಲ್ಲಿ ಮೆಸೇಜ್ ಕಳುಹಿಸುತ್ತಿದ್ದ ಶಕೀರ್, ತನ್ನ ಖಾತೆಗೆ ಪೇಟಿಎಂ ಮೂಲಕ ದುಡ್ಡು ಬರುವಂತೆ ಮಾಡುತ್ತಿದ್ದ.