ಬಿರಿಯಾನಿಯಲ್ಲಿ ಲೆಗ್ ಪೀಸ್ ಸಿಗಬೇಕೆಂದು ನೀವು ಎಷ್ಟರ ಮಟ್ಟಿಗೆ ತಲೆಕೆಡಿಸಿಕೊಳ್ಳಬಹುದು? ಹಾಗೇ, ನಿಮ್ಮ ದೂರು-ದುಮ್ಮಾನಗಳನ್ನು ಜನಪ್ರತಿನಿಧಿಗಳಿಗೆ ತಿಳಿಸಲು ಯಾವೆಲ್ಲಾ ಎಲ್ಲೆಗಳಿರಬಹುದು?
ಫುಡ್ ಡೆಲಿವರಿ ಮುಖಾಂತರ ತಾನು ತರಿಸಿಕೊಂಡ ಬಿರಿಯಾನಿಯೊಂದರಲ್ಲಿ ಲೆಗ್ ಪೀಸ್ ಇಲ್ಲವೆಂಬ ಕಾರಣಕ್ಕೆ ಅಸಮಾಧಾನಗೊಂಡ ತೆಲಂಗಾಣದ ವ್ಯಕ್ತಿಯೊಬ್ಬರು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್‌ರನ್ನು ತಮ್ಮ ಟ್ವೀಟ್‌ಗೆ ಟ್ಯಾಗ್ ಮಾಡುವ ಮೂಲಕ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಇಂಥ ದೂರಿಗೆಲ್ಲಾ ಸಚಿವರು ಪ್ರತಿಕ್ರಿಯೆ ನೀಡಬಹುದು ಎಂದು ನಿರೀಕ್ಷೆ ಮಾಡದಿದ್ದ ಈ ಲೆಗ್‌ಪೀಸ್ ದೇವದಾಸನಿಗೆ ಅಚ್ಚರಿಯೊಂದು ಕಾದಿತ್ತು. ತನ್ನ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕೆಟಿಆರ್, “ನನ್ನನ್ನು ಈ ಟ್ವೀಟ್‌ಗೆ ಏಕೆ ಟ್ಯಾಗ್ ಮಾಡಿರುವಿರಿ ಬ್ರದರ್? ನನ್ನಿಂದ ನೀವು ಏನನ್ನು ನಿರೀಕ್ಷೆ ಮಾಡುತ್ತಿರುವಿರಿ? ಎಂದು ಪ್ರಶ್ನಿಸಿದ್ದಾರೆ.