ಮನುಷ್ಯನ ಶರೀರ ಹಾಗೂ ಅದರಲ್ಲಿ ಉಂಟಾಗುವ ಕಾಯಿಲೆಗಳು ಒಮ್ಮೊಮ್ಮೆ ತೀರಾ ವಿಚಿತ್ರ ಎಂದೆನಿಸಿಬಿಡುತ್ತೆ. ರೋಗಿಯ ಹೊಟ್ಟೆಯಲ್ಲಿ ಲೋಹದ ವಸ್ತುಗಳು ಸಿಕ್ಕಂತಹ ಸಾಕಷ್ಟು ಪ್ರಕರಣಗಳನ್ನೂ ನಾವು ಕೇಳಿದ್ದೇವೆ. ಮನುಷ್ಯನ ದೇಹ ಕಲ್ಲಿನಂತೆ ಬದಲಾಗುತ್ತಿದೆ ಎಂಬ ಸುದ್ದಿ ಕೂಡ ವೈಜ್ಞಾನಿಕ ಲೋಕಕ್ಕೆ ಸವಾಲೆಸೆದಿತ್ತು. ಇದೀಗ ಇಂತದ್ದೇ ವಿಚಿತ್ರಗಳ ಸಾಲಿಗೆ ಇನ್ನೊಂದು ಪ್ರಕರಣ ಸೇರಿದೆ. ಓರ್ವ ವ್ಯಕ್ತಿಯ ಎದೆಯಲ್ಲಿ ನೋವು ಕಾಣಿಸಿಕೊಳ್ತಿದೆ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ರೋಗಿಯ ಹೃದಯದಲ್ಲಿ ಸಿಕ್ಕ ಆ ವಿಚಿತ್ರ ವಸ್ತು ದೊಡ್ಡ ಆಘಾತವನ್ನೇ ತಂದಿದೆ.
ಸ್ಮಾರ್ಟ್ ಆಗಿ ಕೆಲಸ ಶುರು ಮಾಡಿ ಕೈ ತುಂಬ ಗಳಿಸಿ
56 ವರ್ಷದ ವ್ಯಕ್ತಿಯ ಎದೆಯಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ತಿತ್ತು. ಇದೇ ಕಾರಣಕ್ಕೆ ವೈದ್ಯರ ಬಳಿ ತೆರಳಿದ್ದ ವೇಳೆ ವೈದ್ಯರಿಗೂ ನಿಖರವಾಗಿ ಇದು ಯಾವ ರೀತಿಯ ಸಮಸ್ಯೆ ಎಂದು ಅರ್ಥವಾಗಿರಲಿಲ್ಲ. ಹೀಗಾಗಿ ಎಕ್ಸ್ ರೇ ಹಾಗೂ ಸಿಟಿ ಸ್ಕ್ಯಾನ್ ಮಾಡಲಾಯ್ತು. ಇಲ್ಲಿ ವ್ಯಕ್ತಿಯ ಹೃದಯವನ್ನು ಕೊರೆಯುವ ರೀತಿಯಲ್ಲಿ ಹರಿತವಾದ ವಸ್ತುವೊಂದಿಗೆ ಎಂಬುದು ವೈದ್ಯರ ಅರಿವಿಗೆ ಬಂದಿತ್ತು. ಇದರಿಂದಾಗಿ ವ್ಯಕ್ತಿಯ ಹೃದಯದಲ್ಲಿ ಒಂದು ರಂಧ್ರ ಕೂಡ ಉಂಟಾಗಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆ ಆರಂಭಿಸಿದ ವೈದ್ಯರಿಗೆ ದೊಡ್ಡ ಶಾಕ್ ಕಾದಿತ್ತು. ಏಕೆಂದರೆ ರೋಗಿಯ ಎದೆಯಲ್ಲಿ ಸಿಮೆಂಟ್ನ ತುಂಡೊಂದು ಸಿಕ್ಕಿದೆ..!
ಸಂಘ ಪರಿವಾರದ ನಾಯಕರಿಗೆ ಕುರ್ಚಿ ವ್ಯಾಮೋಹವಿಲ್ಲ; RSS ಟೀಕಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ; ಕಾಂಗ್ರೆಸ್-ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ
ಅರ್ರೆ..! ಸಿಮೆಂಟ್ನ ತುಂಡು ಎದೆಗೆ ಹೋಗಲು ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿರಬಹುದು..! ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಆಸ್ಟಿಯೀಪರೋಸಿಸ್ ಎಂಬ ಸಮಸ್ಯೆಯಿತ್ತು. ಇದರಿಂದಾಗಿ ಆತನ ಶರೀರದಲ್ಲಿ ವೆಟೆಬ್ರಾ ಹಾನಿಗೆ ಒಳಗಾಗಿತ್ತು. ಈ ಸಮಸ್ಯೆಯನ್ನು ಸರಿ ಪಡಿಸಲು ವೈದ್ಯರು ಕೈಫೋಪ್ಲಾಸ್ಟಿ ನಡೆಸಿದ್ದರು. ಈ ಶಸ್ತ್ರಚಿಕಿತ್ಸೆಯ ವೇಳೆ ರೀಡ್ ಮೂಳೆಗೆ ವಿಶೇಷ ಮಾದರಿಯ ಸಿಮೆಂಟ್ ರೀತಿಯ ವಸ್ತುವನ್ನು ಇಂಜೆಕ್ಟ್ ಮಾಡಲಾಗಿತ್ತು. ಇದರಿಂದ ಮೂಳೆಯು ಗಟ್ಟಿಯಾಗುತ್ತಿತ್ತು. ಆದರೆ ಈ ವ್ಯಕ್ತಿಯ ಮೂಳೆಗೆ ಆ ವಿಶೇಷ ಸಿಮೆಂಟ್ ಅಂಟಿಕೊಂಡಿರಲಿಲ್ಲ. ಸಿಮೆಂಟ್ನ ತುಂಡು ಹೃದಯದ ಬಳಿ ಬಿದ್ದಿತ್ತು.