alex Certify ಪತ್ನಿ ಸೀರೆ ಧರಿಸುವ ಶೈಲಿಯಿಂದ ಮನನೊಂದು ಪತಿ ಆತ್ಮಹತ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಸೀರೆ ಧರಿಸುವ ಶೈಲಿಯಿಂದ ಮನನೊಂದು ಪತಿ ಆತ್ಮಹತ್ಯೆ….!

ತನ್ನ ಪತ್ನಿ ಸೀರೆ ಧರಿಸುವ ಶೈಲಿ ಸರಿಯಿಲ್ಲ. ಆಕೆ ಅರೆಬರೆ ರೀತಿಯಲ್ಲಿ ಸೀರೆ ಧರಿಸುವ ಕಾರಣ ತನಗೆ ಎಲ್ಲರ ಮುಂದೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಔರಂಗಾಬಾದ್ ಜಿಲ್ಲೆಯ ಮುಕುಂದ ನಗರ ನಿವಾಸಿ ಸಮಾಧಾನ್ ಸಬ್ಲೆ ಎಂಬಾತ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪತಿಯಾಗಿದ್ದು, ಅದಕ್ಕೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ತಾನೇಕೆ ಸಾಯುತ್ತಿದ್ದೇನೆ ಎಂಬ ಕಾರಣವನ್ನು ಬಿಚ್ಚಿಟ್ಟಿದ್ದಾನೆ.

ನನ್ನ ಪತ್ನಿಗೆ ಸೀರೆಯನ್ನು ಸರಿಯಾಗಿ ಉಟ್ಟುಕೊಳ್ಳುವಂತೆ ಹಲವಾರು ಬಾರಿ ಕಿವಿಮಾತು ಹೇಳಿದರೂ ಸಹ ಆಕೆ ನಿರ್ಲಕ್ಷ ಮಾಡುತ್ತಿದ್ದಳು. ಇದರಿಂದಾಗಿ ನನಗೆ ಎಲ್ಲರ ಮುಂದೆ ಮುಜುಗರವಾಗುತ್ತಿತ್ತು. ಹೀಗೆ ಹೇಳಿದಾಗ ಆಕೆ ನನ್ನೊಂದಿಗೆ ಮಾತನಾಡುವುದನ್ನೇ ಬಿಟ್ಟಳು. ಇದರಿಂದಾಗಿ ಜೀವನವೇ ಬೇಡವೆಂದು ಅನಿಸಿ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಪತಿ ತಿಳಿಸಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...