
ಇತ್ತೀಚೆಗೆ ಬಿಡುಗಡೆಯಾದ ಚಾರ್ಲಿ ಸಿನಿಮಾ ನೀವು ನೋಡಿದ್ದರೆ, ಮನುಷ್ಯ ಹಾಗೂ ಶ್ವಾನದ ನಡುವಿನ ಬಾಂಧವ್ಯದ ಕಥೆಯು ನಿಮ್ಮ ಮನಮುಟ್ಟಿರುತ್ತದೆ. ಈ ಶ್ವಾನಗಳೇ ಹೀಗೆ ತಮಗೆ ಪ್ರೀತಿ ತೋರಿಸಿದ್ರೆ ಅದು ಮನುಷ್ಯನಿಗೆ ತನ್ನ ಪ್ರಾಣವನ್ನೂ ಕೊಡಲೂ ರೆಡಿಯಾಗಿರುತ್ತೆ. ಇದಕ್ಕೇ ಹೇಳೋದು ಅಲ್ವಾ ಸ್ವಾಮಿನಿಷ್ಠೆ ಎಂದು. ನಾವು ಇದನ್ನು ಯಾಕೆ ಹೇಳ್ತಾ ಇದ್ದೀವೆ ಅಂದ್ರೆ ಇದೀಗ ವೈರಲ್ ಆಗಿರೋ ವಿಡಿಯೋ ಖಂಡಿತಾ ನಿಮ್ಮ ಹೃದಯ ಗೆಲ್ಲೋದ್ರಲ್ಲಿ ಸಂಶಯವೇ ಇಲ್ಲ.
ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಮುದ್ದಿಸುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಬಹಳ ಪ್ರೀತಿಯಿಂದ ಅದರ ತಲೆ ನೇವರಿಸುತ್ತಾ ಮುದ್ದು ಮಾಡಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರ ಹೃದಯ ಕರಗಿಸಿದೆ. ಈ ವಿಡಿಯೋವನ್ನು ಇನ್ಸೈಟ್ಸ್ ಆಫ್ ನೇಗಿ ಲೈಫ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಮುಂಬೈನ ಟ್ರಾಫಿಕ್ ಸಿಗ್ನಲ್ನಲ್ಲಿ ಕುಳಿತ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಮುದ್ದಿಸುತ್ತಾ ಅದರ ತಲೆ ನೇವರಿಸಿದ್ದಾನೆ. ನಾಯಿಯಲ್ಲಿ ಉಣ್ಣುಗಳಿವೆಯೇ ಎಂದು ಪರೀಕ್ಷಿಸಿದ್ದಾರೆ. ನಂತರ ಅದನ್ನು ಪ್ರೀತಿಯಿಂದ ಮುದ್ದಿಸುತ್ತಾ ತಬ್ಬಿಕೊಂಡಿದ್ದಾರೆ. ಮುಂಬೈನ ಚೆಂಬೂರ್ನಲ್ಲಿರುವ ಟ್ರಾಫಿಕ್ ಸಿಗ್ನಲ್ ಬಳಿ ಈ ಹೃದಯಸ್ಪರ್ಶಿ ದೃಶ್ಯಾವಳಿಗೆ ಸಾಕ್ಷಿಯಾಗಿದೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರಿಂದ ಹೃದಯಸ್ಪರ್ಶಿ ಪ್ರತಿಕ್ರಿಯೆಗಳ ಅಲೆಯನ್ನೇ ಪಡೆದುಕೊಂಡಿದೆ.