ಜೀವನದಲ್ಲಿ ಒಂದು ಲಾಟರಿ ಟಿಕೆಟ್‌ನಲ್ಲಿ ಅದೃಷ್ಟ ಖುಲಾಯಿಸುವುದೇ ದೊಡ್ಡ ವಿಚಾರ. ಅಂಥದ್ದರಲ್ಲಿ ಒಂದೇ ಕಂಪನಿಯ ಲಾಟರಿ ಟಿಕೆಟ್‌ಗಳು ಎರಡು ಬಾರಿ ಬಂಪರ್ ಬಹುಮಾನ ತರುವಂತಾದರೆ?
2002ರಲ್ಲಿ ಲಾಟರಿ ಟಿಕಟ್ ಒಂದರಲ್ಲಿ $100,000 (76 ಲಕ್ಷ ರೂ) ಬಹುಮಾನ ಗೆದ್ದಿದ್ದ ಕೋಪ್ಲೆಂಡ್, ಎರಡು ದಶಕಗಳ ಬಳಿಕ ಲಾಟರಿ ಪ್ರಧಾನ ಕಚೇರಿಗೆ ತೆರಳಿ $1 ದಶಲಕ್ಷ (7.6 ಕೋಟಿ ರೂಗಳು) ಪಡೆದುಕೊಂಡಿದ್ದಾರೆ.
ಎ-ಇಲೆವೆನ್ ಸ್ಟೋರ್‌ನಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದ ಕೋಪ್ಲೆಂಡ್, ಡಿಸೆಂಬರ್ 4ರ ಡ್ರಾನಲ್ಲಿ ಬಂದಿದ್ದ 1-11-25-45-48 ಎಂಬ ಐದು ಸಂಖ್ಯೆಗಳು ತಮ್ಮ ಟಿಕೆಟ್‌ನಲ್ಲಿರುವ ಸಂಖ್ಯೆಗಳೊಂದಿಗೆ ಹೊಂದುತ್ತಿದೆ ಎಂದು ಅರಿತುಕೊಂಡರು. ಜೂನ್ 2002ರಲ್ಲಿ ಮೊದಲ ಬಾರಿಗೆ ದೊಡ್ಡ ಮೊತ್ತವನ್ನು ಗೆದ್ದಿದ್ದ ಕೋಪ್ಲೆಂಡ್ ಆ ಜಾಕ್‌ಪಾಟ್‌ನಲ್ಲಿ ಒಂದು ಲಕ್ಷ ಡಾಲರ್ ಜೇಬಿಗಿಳಿಸಿಕೊಂಡಿದ್ದರು.
BIG NEWS: ಪಾದಯಾತ್ರೆಗೆ ಸಜ್ಜಾದ ಯುವ ಕಾಂಗ್ರೆಸ್; ಜಾರಕಿಹೊಳಿ ಸಿಡಿ ಕೇಸ್; ನಿಲುವಳಿ ಸೂಚನೆ ಮಂಡಿಸಲು ಸಿದ್ಧತೆ ನಡೆಸಿದ ಕೈ ಪಾಳಯ
ಇಂಥದ್ದೇ ಮತ್ತೊಂದು ಘಟನೆಯಲ್ಲಿ, ವರ್ಜೀನಿಯಾದ ವ್ಯಕ್ತಿಯೊಬ್ಬರು ತಪ್ಪಾಗಿ ಒಂದೇ ರೀತಿಯ ಟಿಕೆಟ್‌ಗಳನ್ನು ಎರಡು ಬಾರಿ ಖರೀದಿಸಿ, ಅವುಗಳಿಗೆ ಡ್ರಾ ಸಂಖ್ಯೆಗಳು ಮ್ಯಾಚ್ ಆಗಿ ಬಂಪರ್ ಬಹುಮಾನ ಪಡೆದುಕೊಂಡಿದ್ದಾರೆ.
ಫಯೆಟ್ಟೆವಿಲ್ಲೆಯ ಸ್ಕಾಟ್ಟಿ ಥಾಮಸ್ ಹೆಸರಿನ ಈ ವ್ಯಕ್ತಿ ಆನ್ಲೈನ್‌ನಲ್ಲಿ $2 ತೆತ್ತು ಖರೀದಿಸಿದ ಪ್ರತಿಯೊಂದು ಟಿಕೆಟ್‌ಗೂ ವರ್ಷಕ್ಕೆ $25,000ನಂತೆ ಜೀವನವಿಡೀ ಪಡೆಯುವ ಬಂಪರ್ ಖುಲಾಯಿಸಿತ್ತು. ಬಹುಮಾನ ಪಡೆದುಕೊಳ್ಳುವ ವೇಳೆ 49 ವರ್ಷದ ಸ್ಕಾಟಿ ಒಂದೇ ಬಾರಿಗೆ ಪೇಔಟ್ ಪಡೆಯುವ ಮೂಲಕ $780,000 ಜೇಬಿಗಿಳಿಸಿದ್ದಾರೆ.