ಸ್ಪೇನ್ನ ಸ್ಯಾನ್ ಫೆರ್ಮಿನ್ ಉತ್ಸವದ ಬಗ್ಗೆ ನೀವು ಕೇಳಿರಬಹುದು. ಜನರು ಗೂಳಿಗಳೊಂದಿಗೆ ಸೆಣಸಾಡುತ್ತಾರೆ. ಗೂಳಿಗಳನ್ನು ಸಾಮಾನ್ಯವಾಗಿ ಆಕ್ರಮಣಕಾರಿ ಎಂದೇ ಪರಿಗಣಿಸಲಾಗುತ್ತದೆ. ಕೋಪಗೊಂಡ ಗೂಳಿಯೊಂದಿಗೆ ಯಾರಾದರೂ ಮುಖಾಮುಖಿಯಾಗಿದರೆ, ಅವು ತಮ್ಮ ಚೂಪಾದ ಕೊಂಬುಗಳಿಂದ ವ್ಯಕ್ತಿಯನ್ನು ಎಸೆಯುತ್ತವೆ. ಇತ್ತೀಚೆಗೆ, ಅಪಾಯಕಾರಿ ಗೂಳಿಯ ಹಿಡಿತದಿಂದ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಇದೀಗ ವೈರಲ್ ಆಗಿರುವ ದೃಶ್ಯಾವಳಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಗೂಳಿಯೊಂದು ವ್ಯಕ್ತಿಯೊಬ್ಬನನ್ನು ನೋಡಿ ಕೈಗಳನ್ನು ಕೆದರುತ್ತಾ ಅವನ ಮೇಲೆ ದಾಳಿ ಮಾಡುತ್ತದೆ. ತನ್ನ ಜೀವವನ್ನು ಉಳಿಸಿಕೊಳ್ಳಲು ಅಸಹಾಯಕ ವ್ಯಕ್ತಿಯು ರಸ್ತೆಯ ಅಂಚಿನಲ್ಲಿದ್ದ ಲೋಹದ ಕಂಬದ ಮೇಲೆ ವೇಗವಾಗಿ ಏರುತ್ತಾನೆ.
ಕೆರಳಿದ ಗೂಳಿ, ಕಂಬದ ಸುತ್ತಲೂ ಹಿಂದಕ್ಕೆ ಮತ್ತು ಮುಂದಕ್ಕೆ ನಡೆಯುತ್ತದೆ. ವ್ಯಕ್ತಿಯು ಕಂಬವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುತ್ತಾನೆ. ಗೂಳಿ ಯಾವಾಗ ಹೋಗುತ್ತದೋ ಎಂದು ಕಾಯುತ್ತಾನೆ. ಸುಸ್ತಾದ ಗೂಳಿಯು ಆತ ಇಳಿಯದುದನ್ನು ಕಂಡು ಅಲ್ಲಿಂದ ಹೋಗಬಹುದು ಅಂತಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಗೂಳಿಯ ಕುತ್ತಿಗೆಗೆ ಹಗ್ಗವನ್ನು ಕಟ್ಟಲಾಗಿದ್ದು, ದಾರಿಹೋಕರರು ಯಾರಾದರೂ ಬಂದು ಅದನ್ನು ತೆಗೆಯುವವರೆಗೆ ಆ ವ್ಯಕ್ತಿಗೆ ಕಂಬದಿಂದ ಇಳಿದು ಪಾರಾಗಲು ಸಾಧ್ಯವಿಲ್ಲ. ಇಲ್ಲಿಯವರೆಗೆ, ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ 7 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.