
ಮೇಲ್ಛಾವಣಿಯೊಂದರಿಂದ 30 ಅಡಿಯಷ್ಟು ಆಳಕ್ಕೆ ಬಿದ್ದು ದೇಹದ ಬಹುತೇಕ ಎಲ್ಲಾ ಮೂಳೆ ಮುರಿದುಕೊಂಡಿದ್ದ ವ್ಯಕ್ತಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.
53 ವರ್ಷದ ಇಯಾನ್ ಲಾಕ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಸ್ನೇಹಿತರೊಬ್ಬರ ಮನೆಗೆ ಆಂಟೆನಾ ಅಳವಡಿಸುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಅವರು 30 ಅಡಿಗಳಷ್ಟು ಆಳಕ್ಕೆ ಕುಸಿದುಬಿದ್ದ ಕಾರಣ ಅವರ ದೇಹದ ಪ್ರತಿಯೊಂದು ಮೂಳೆಯೂ ಮುರಿದಿದೆ.
ನೆಲದ ಮೇಲೆ ಬಿದ್ದ ನಂತರ, ಲಾಕ್ ತನ್ನ ಸ್ನೇಹಿತನಿಗೆ ತನ್ನ ಕಾಲುಗಳಲ್ಲಿ ಯಾವುದೇ ಸಂಚಲನ ಅನುಭವಕ್ಕೆ ಬರುತ್ತಿಲ್ಲ ಎಂದಿದ್ದಾರೆ. ಅವರನ್ನು ವಿಮಾನದಲ್ಲಿ ಮ್ಯಾಂಚೆಸ್ಟರ್ ರಾಯಲ್ ಇನ್‌ಫರ್ಮರಿಗೆ ಕರೆದೊಯ್ಯಲಾಯಿತು. ವೈದ್ಯರು ಯಾವುದೇ ಸಮಯದಲ್ಲೂ ಕೆಟ್ಟ ಸುದ್ಧಿ ಕೇಳಲು ಮನೋಬಲ ತಂದುಕೊಳ್ಳುವಂತೆ ಆತನ ಕುಟುಂಬಕ್ಕೆ ತಿಳಿಸಿದ್ದರು.
ಲಾಕ್ ತನ್ನ ತೋಳನ್ನು ಎರಡು ಸ್ಥಳಗಳಲ್ಲಿ ಮುರಿದುಕೊಂಡಿದ್ದರು. ಅವರ ಮೂಳೆ, ಮತ್ತು ಮಣಿಕಟ್ಟಿನ ಮುಖಾಂತರ ಚರ್ಮದ ಮೂಲಕ ಚಾಚಿಕೊಂಡಿತ್ತು. ಆತನ ಕೈ ನಜ್ಜುಗುಜ್ಜಾಗಿದ್ದು, ನಾಲ್ಕು ಕಡೆ ಬೆನ್ನು ಮುರಿದಿದೆ. ಆತನ ಎಲ್ಲಾ ಪಕ್ಕೆಲುಬುಗಳು ಮುರಿದುಹೋಗಿದ್ದು, ಕಸಿಯಾಗಿದ್ದ ಶ್ವಾಸಕೋಶವನ್ನು ಸಹ ಚುಚ್ಚಿಕೊಂಡಿದ್ದರು. ಅವರ ಸೊಂಟವು 30 ವಿವಿಧ ಸ್ಥಳಗಳಲ್ಲಿ ಛಿದ್ರವಾಗಿತ್ತು.
ಇಯಾನ್‌ನ ಮಗಳು, ಶರೆಲ್‌ಗೆ ತನ್ನ ತಂದೆಗೆ ಅಂತಿಮ ವಿದಾಯ ಹೇಳಲು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಇಯಾನ್‌ನನ್ನು ಭೇಟಿಯಾಗಲು ಅನುಮತಿಸಲಾಗಿತ್ತು.
“ನಾನು ಕೋಮಾದಲ್ಲಿದ್ದಾಗ, ನನಗೆ ಕೆಲವು ಭಯಾನಕ ಕನಸುಗಳು ಪ್ರಜ್ಞೆಯಲ್ಲಿ ಬರುತ್ತಿದ್ದವು. ನಾನು ಕೆಲ ವಿಷಯಗಳನ್ನು ನೋಡುತ್ತಲೇ ಇದ್ದೆ ಮತ್ತು ನಾನು ನೋಡುತ್ತಲೇ ಇರುವ ವಿಷಯಗಳನ್ನು ನನ್ನ ಮನಸ್ಸಿನಲ್ಲಿ ಆಡುತ್ತಿದ್ದೆ. ಈ ದೊಡ್ಡ ಕನಸನ್ನು ನಾನೇ ನೋಡುತ್ತಿದ್ದೆ. ನನ್ನ ಮೆದುಳು ನಾನು ಸೇವಿಸುತ್ತಿದ್ದ ಡ್ರಗ್ಸ್‌ನ ಕಾಕ್‌ಟೈಲ್‌ನಿಂದ ಸಂಪೂರ್ಣವಾಗಿ ವಿಚಲಿತಗೊಂಡಿತ್ತು. ಅದು ಯಾವ ದಿನ ಎಂದು ನನಗೆ ತಿಳಿದಿರಲಿಲ್ಲ,” ಎನ್ನುತ್ತಾರೆ ಲಾಕ್.
ಮ್ಯಾಂಚೆಸ್ಟರ್ ರಾಯಲ್ ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ, ಇಯಾನ್ ಕೋವಿಡ್ ಪೀಡಿತರಾದ ಕಾರಣ ಟ್ರಾಫರ್ಡ್ ಜನರಲ್ ಆಸ್ಪತ್ರೆಗೆ ಅವರನ್ನು ವರ್ಗಾಯಿಸಲಾಯಿತು. ಅವರು ಪ್ರಸ್ತುತ ಕೋವಿಡ್ ವಾರ್ಡ್‌ನಿಂದ ಬಿಡುಗಡೆಗೊಳ್ಳಲು ಕಾಯುತ್ತಿದ್ದಾರೆ, ಅದಾದ ಕೂಡಲೇ ತಮ್ಮ ಚೇತರಿಕೆಯ ದೀರ್ಘ ಹಾದಿಯನ್ನು ಸವೆಸಲು ಆರಂಭಿಸಬಹುದು.
ಮೂರು ವಾರಗಳ ಬಳಿಕ ಮನೆಗೆ ಮರಳಲು ಉತ್ಸುಕವಾಗಿರುವ ಲಾಕ್ ಅಪಘಾತದ ನಂತರ ಮೊದಲ ಬಾರಿಗೆ ಅವರ ಕುಟುಂಬವನ್ನು ಭೇಟಿಯಾಗುತ್ತಾರೆ.