ಅಕ್ಟೋಬರ್ 29 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ನಿಗಮವು ಕೆಲವು ಲಗೇಜ್ ಗಳಿಗೆ ಹೆಚ್ಚುವರಿ ಶುಲ್ಕವನ್ನು ಪರಿಚಯಿಸಿದೆ. ಈ ನೀತಿಯು ಸಾರಿಗೆಯಲ್ಲಿ ಅಸ್ತಿತ್ವದಲ್ಲಿರುವ ಲಗೇಜ್ ನಿಯಮಗಳನ್ನು ಸರಳೀಕರಿಸುವ ಗುರಿಯನ್ನು ಹೊಂದಿದೆ.
ಪ್ರಯಾಣಿಕರಿಗೆ ಯಾವುದೇ ಶುಲ್ಕವಿಲ್ಲದೆ 30 ಕೆಜಿ ಯೊಳಗಿನ ವಸ್ತುಗಳನ್ನು ಲಗೇಜ್ ಚಾರ್ಜ್ ಇಲ್ಲದೇ ಬಸ್ ನಲ್ಲಿ ಉಚಿತವಾಗಿ ಸಾಗಿಸಬಹುದು. 30 ಕೆಜಿಯೊಳಗಿನ ತೂಕದ ವಸ್ತುಗಳನ್ನು ಉಲ್ಲೇಖಿಸಿರುವ ಪಟ್ಟಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೆಸರಿಸಿಲ್ಲ. ಈ ಲೋಪದೋಷದಿಂದ ಪ್ರಯಾಣಿಕನಿಗೆ ಲ್ಯಾಪ್ ಟಾಪ್ ಬಳಸಲು ಹೆಚ್ಚುವರಿ ಶುಲ್ಕ ನೀಡುವಂತೆ ಕೇಳಲಾಗಿದೆ.