ಜ್ಯೂರಿಚ್‌ನಿಂದ ಡ್ರೆಸ್ಡೆನ್‌ಗೆ ತೆರಳುತ್ತಿದ್ದ ಸ್ವಿಟ್ಜರ್ಲೆಂಡ್ ಏರ್ ವಿಮಾನದಲ್ಲಿ 33 ವರ್ಷದ ಪ್ರಯಾಣಿಕನೊಬ್ಬ ಹಸ್ತಮೈಥುನ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಸೋಮವಾರ ಬೆಳಿಗ್ಗೆ ಫ್ಲೈಟ್ ಎಲ್ಎಕ್ಸ್ 918 ರಲ್ಲಿ ಈ ಘಟನೆ ಸಂಭವಿಸಿದ್ದು, ಸಹ ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಯಿತು.
ಬೆಳಿಗ್ಗೆ 7:40 ರ ಸುಮಾರಿಗೆ, 73 ನಿಮಿಷಗಳ ವಿಮಾನದ ಅರ್ಧದಾರಿಯಲ್ಲಿದ್ದಾಗ, ಆ ವ್ಯಕ್ತಿಯು ತನ್ನ ಕೈಗಳನ್ನು ಪ್ಯಾಂಟ್‌ನಲ್ಲಿ ಇಟ್ಟುಕೊಂಡಿದ್ದನೆಂದು ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಆ ವ್ಯಕ್ತಿಯ ಕೃತ್ಯಗಳಿಂದ ತೊಂದರೆಗೊಳಗಾದ ಪ್ರಯಾಣಿಕರು ಬೇರೆ ಆಸನಕ್ಕೆ ಸ್ಥಳಾಂತರಿಸಲು ಕೋರಿದ್ದು, ಬ್ಲಿಕ್ ವರದಿಯ ಪ್ರಕಾರ, ಆತನು ಅಸಭ್ಯ ವರ್ತನೆಯನ್ನು ನಿಲ್ಲಿಸುವ ಮೊದಲು ಸಿಬ್ಬಂದಿ ಆತನಿಗೆ ಪದೇ ಪದೇ ಎಚ್ಚರಿಕೆ ನೀಡಿದ್ದರು.
ಡ್ರೆಸ್ಡೆನ್‌ಗೆ ಬಂದ ನಂತರ, ಡ್ರೆಸ್ಡೆನ್ ಫೆಡರಲ್ ಪೊಲೀಸರು ಜರ್ಮನ್ ಪ್ರಜೆಯಾದ ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರು ಮಹಿಳಾ ಪ್ರಯಾಣಿಕರ ಸಮ್ಮುಖದಲ್ಲಿ “ಸಕ್ರಿಯ” ವಾಗಿದ್ದೆ ಎಂದು ಒಪ್ಪಿಕೊಂಡ ಆತ, ತನ್ನ ಜನನಾಂಗಗಳನ್ನು ಬಹಿರಂಗಪಡಿಸದ ಕಾರಣ ಯಾವುದೇ ತಪ್ಪು ಮಾಡಿದ್ದೇನೆಂದು ನನಗೆ ತಿಳಿದಿರಲಿಲ್ಲ ಎಂದು ವಾದಿಸಿದ್ದಾನೆ. ಸದ್ಯ ಆ ವ್ಯಕ್ತಿಯನ್ನು ಸಾರ್ವಜನಿಕ ಕಿರಿಕಿರಿ ಉಂಟುಮಾಡಿದ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ.