ಹಾಸನ: ಮರ ಕಡಿಯುವ ವೇಳೆ ಆಯತಪ್ಪಿ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದು ವ್ಯಕ್ತಿಗೆ ಬೆಂಕಿ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೆನ್ನಲಿ ಗ್ರಾಮದ ಎಲೆಕ್ಟ್ರಿಷಿಯನ್ ಲಕ್ಷ್ಮಣ್ ಗಾಯಗೊಂಡವರು. ಮರ ಕತ್ತರಿಸುವಾಗ ಅವರು ಆಯತಪ್ಪಿ ಬಿದ್ದಿದ್ದಾರೆ. ವಿದ್ಯುತ್ ಶಾಕ್ ನಿಂದಾಗಿ ಟ್ರಾನ್ಸ್ಫಾರ್ಮರ್ ನಲ್ಲೇ ಸಿಲುಕಿ ನರಳಾಡಿದ್ದಾರೆ. ಇದೇ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ಲಕ್ಷ್ಮಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುತ್ತ ಜನರಿದ್ದರೂ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಕೊನೆಗೆ ಚೆಸ್ಕಾಂ ಸಿಬ್ಬಂದಿ ಧಾವಿಸಿ ಬಂದು ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿ ಹೊತ್ತಿಕೊಂಡು ಗಾಯಗೊಂಡಿದ್ದ ಲಕ್ಷ್ಮಣ್ ನನ್ನು ರಕ್ಷಣೆ ಮಾಡಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದ ಬಳಿ ಘಟನೆ ನಡೆದಿದ್ದು, ಗಾಯಾಳು ಲಕ್ಷ್ಮಣ್ ನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.