ಇವತ್ತಿನ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ವಿಡಿಯೊ ಎಂದರೆ, ಅದು ಮೃಗಾಲಯವೊಂದರ ನಿರ್ವಾಹಕನೊಬ್ಬ ತನ್ನ ಹೆಗಲ ಮೇಲೆ 22 ಅಡಿಗಳ ಹೆಬ್ಬಾವನ್ನು, ಹಗ್ಗದಂತೆ ಎತ್ತಿಕೊಂಡು ಒಂದು ರೂಮಿನಿಂದ ಮತ್ತೊಂದಕ್ಕೆ ಹೋಗುತ್ತಿರುವುದು ! ಹೌದು, ನೀವು ನೋಡಿಲ್ಲ ಎಂದರೆ, ಈಗಲೇ ಸರ್ಚ್ ಮಾಡಿ ನೋಡಿಬಿಡಿ.
ಜೇಯ್ ಬ್ರೀವರ್ ಎಂಬ ಮೃಗಾಲಯ ಸಿಬ್ಬಂದಿಯೊಬ್ಬರು ಹೆಬ್ಬಾವನ್ನು ಹೊತ್ತುಕೊಂಡು ಹೋಗುವ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಹಾವನ್ನು ಕೈನಲ್ಲಿ ಎತ್ತಿಕೊಂಡು ಅಥವಾ ಬ್ಯಾಗ್‍ನಲ್ಲಿ ಹಾಕಿ ಹೆಗಲ ಮೇಲೆ ಹೇರಿಕೊಂಡು ಹೋಗಲಾಗುತ್ತದೆ. ಆದರೆ, ಇದು 22 ಅಡಿ ಉದ್ದನೆಯ, 125 ಕೆ.ಜಿ. ತೂಕದ ದೈತ್ಯ. ಹಾಗಾಗಿ , ಇದೇ ಸುಲಭ ಮಾರ್ಗ ಎನಿಸಿ ಹೀಗೆ ಮಾಡಿದೆ ಎನ್ನುತ್ತಾರೆ ಝೂ ಕೀಪರ್ ಜೇಯ್ ಬ್ರೀವರ್.
‘jayprehistoricpets’ ಈ ಇನ್‍ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಲಭ್ಯವಿದೆ.
https://www.youtube.com/watch?v=mf9KuNPfbD0&feature=youtu.be