ಎಸ್ಸೆಕ್ಸ್ (ಬ್ರಿಟನ್): ಫುಡ್ ಡೆಲಿವರಿ ಬಾಯ್‌ಗಳು ಹೋಟೆಲ್‌ನಿಂದ ಆಹಾರವನ್ನು ಸಮಯಕ್ಕೆ ತಲುಪಿಸುವುದನ್ನು ಎಲ್ಲರೂ ನಿರೀಕ್ಷಿಸುತ್ತೇವೆ, ಅದು ಆಗದೇ ಹೋದಾಗ ಆಹಾರ ಪೂರೈಕೆದಾರರ ಗ್ರಾಹಕ ವಿಭಾಗಕ್ಕೆ ಕರೆ ಮಾಡಿ ದೂರು ನೀಡುತ್ತೇವೆ.
ಆನ್‌ಲೈನ್‌ನಲ್ಲಿ ಕಳಪೆ ರೇಟಿಂಗ್ ಕೊಡುತ್ತೇವೆ. ಆದರೆ, ಇವೆಲ್ಲವನ್ನೂ ಬಿಟ್ಟು, ಸಮಯಕ್ಕೆ ಸರಿಯಾಗಿ ಪಿಜ್ಜಾ ತಂದುಕೊಟ್ಟಿಲ್ಲ ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ ವಿಲಕ್ಷಣ ವಿದ್ಯಮಾನ ಪೂರ್ವ ಇಂಗ್ಲೆಂಡ್‌ನ ಎಸ್ಸೆಕ್ಸ್‌ನಲ್ಲಿ ನಡೆದಿದೆ.
ಪಿಜ್ಜಾ ಡೆಲಿವರಿ ಆಗುವುದೆಂದು 30 ನಿಮಿಷ ಕಾದು ಕುಳಿತ ವ್ಯಕ್ತಿ ಬಳಿಕ, ಪೊಲೀಸರಿಗೆ ಕರೆ ಮಾಡಿ, “ಪಿಜ್ಜಾಕ್ಕೋಸ್ಕರ ಅರ್ಧ ಗಂಟೆಯಿಂದ ಕಾಯುತ್ತಿದ್ದೇನೆ. ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಿ” ಎಂದು ದೂರು ನೀಡಿದ್ದಾನೆ. ಪೊಲೀಸರಿಗೆ ಗಲಿಬಿಲಿ. ಇದು ಗಂಭೀರ ದೂರಾ ಅಥವಾ ತಮಾಷೆಗೋಸ್ಕರ ಮಾಡಿದ್ದೋ ಗೊತ್ತಾಗಲಿಲ್ಲ.
SHOCKING NEWS: ಮಹಿಳೆಯನ್ನು ಕೊಲೆಗೈದು ದೇಹವನ್ನು ತುಂಡರಿಸಿ ನಾಲೆಗೆ ಬಿಸಾಕಿದ ದುಷ್ಕರ್ಮಿಗಳು
ಫೋರ್ಸ್ ಕಂಟ್ರೋಲ್ ರೂಮ್‌ನ ನಂಬರ್‌ಗೆ “ಅನುಚಿತ” ಕರೆ ಮಾಡದಂತೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಶುಕ್ರವಾರ ಒಂದೇ ದಿನ 480 ಕ್ಕೂ ಹೆಚ್ಚು ಇಂತಹ ಅನುಚಿತ ಕರೆಗಳನ್ನು ಕಂಟ್ರೋಲ್ ರೂಮ್ ಸ್ವೀಕರಿಸಿದೆ. ಒಬ್ಬರು ಕರೆ ಮಾಡಿ, ಸಮಯ ಎಷ್ಟು ಎಂದು ಕೇಳಿದ್ದಾಗಿ ಮೂಲಗಳು ತಿಳಿಸಿವೆ.
ತುರ್ತು ಕರೆಯ ನಂಬರ್‌ಗೆ ಅನುಚಿತ ಕರೆ ಮಾಡುವುದರಿಂದ ನಿಜವಾದುದು ಯಾವುದು ತಮಾಷೆ ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ಸ್ಥಿತಿಗೆ ಅಲ್ಲಿನ ಸಿಬ್ಬಂದಿ ತಲುಪುತ್ತಾರೆ. ನಿಜವಾಗಿಯೂ ಅಪಾಯ ಎದುರಾದಾಗ ಸಾರ್ವಜನಿಕರಿಗೆ ನೆರವು ಸಿಗದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.