ತೈವಾನ್: ಪ್ರಪಂಚದಲ್ಲಿ ಎಂತೆಂಥ ಜಿಪುಣರು ಇರುತ್ತಾರೆ ಅಂತಾ ಕೇಳಿದ್ರೆ ಆಶ್ಚರ್ಯವಾಗುತ್ತದೆ. ಇಲ್ಲೊಬ್ಬ ಸೂಪರ್ ಮಾರ್ಕೆಟ್ ನಿಂದ ಮನೆಗೆ ನಡೆಯುತ್ತಾ ಹೋಗಬೇಕಲ್ಲಾ ಎಂದು ಉದಾಸೀನ ತೋರಿದವ ಮಾಡಿದ್ದೇನು ಎಂಬ ಬಗ್ಗೆ ಕೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಾ..!
ತೈವಾನ್‌ನ ವ್ಯಕ್ತಿಯೊಬ್ಬ ಸೂಪರ್ ಮಾರ್ಕೆಟ್‌ನಿಂದ ಮನೆಗೆ ಹೋಗಲು ಅನಾರೋಗ್ಯ ಪೀಡಿತನಂತೆ ವರ್ತಿಸಿ, ಆಂಬುಲೆನ್ಸ್ ಗೆ ಕರೆ ಮಾಡುತ್ತಿದ್ದ. ಆಸ್ಪತ್ರೆ ಪಕ್ಕವೇ ಈತನ ಮನೆ ಇರುವುದರಿಂದ ಆಂಬುಲೆನ್ಸ್ ಅನ್ನು ಉಚಿತ ಟ್ಯಾಕ್ಸಿಯಂತೆ ಬಳಕೆ ಮಾಡಿದ್ದಾನೆ. ಹಾಗಂತ ಸೂಪರ್ ಮಾರ್ಕೆಟ್ ನಿಂದ ಕೇವಲ 200 ಮೀ. ದೂರದಲ್ಲಿ ಈತನ ಮನೆಯಿದೆ.
ಹೀಗೆ ವರ್ಷದಲ್ಲಿ 39 ಬಾರಿ ವಾಂಗ್ ಈ ರೀತಿ ಮೋಸ ಮಾಡಿದ್ದಾನೆ. ಆಸ್ಪತ್ರೆಗೆ ಕರೆತಂದ ತಕ್ಷಣ ತನಗೆ ಏನೂ ಆಗಿಲ್ಲ ಎಂಬಂತೆ ನಡೆದುಕೊಂಡು ಹೋಗಿದ್ದಾನೆ. ಇದರಿಂದ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ ಹಿಂದಿನ ದಾಖಲೆ ಪರಿಶೀಲಿಸಿದಾಗ, ವರ್ಷದಲ್ಲಿ 39 ಬಾರಿ ಅನಾರೋಗ್ಯ ಪೀಡಿತನಂತೆ ವರ್ತಿಸಿ ಆಂಬುಲೆನ್ಸ್ ಬಳಸಿರುವುದು ತಿಳಿದು ಬಂದಿದೆ.
ಸಾರ್ವಜನಿಕ ಸೇವೆಗಳನ್ನು ಈ ರೀತಿ ದುರುಪಯೋಗಪಡಿಸಿಕೊಂಡ ವಾಂಗ್ ವಿರುದ್ಧ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ವಾಂಗ್ ನನ್ನು ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ರೆ, ಪೊಲೀಸರನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ವರದಿಯಾಗಿದೆ. ಮತ್ತೊಂದು ಸಲ ಪುನಾರವರ್ತನೆಯಾದ್ರೆ ದಂಡ ವಿಧಿಸಲಾಗುವುದು ಅಂತಾ ಪೊಲೀಸರು ವಾಂಗ್ ಗೆ ಎಚ್ಚರಿಸಿದ್ದಾರೆ.