ಇತ್ತಿಚೇಗೆ ಅಮೇರಿಕಾದಲ್ಲಿ 77 ವರ್ಷದ ವ್ಯಕ್ತಿಯೊಬ್ಬರು 42 ಕೋಟಿ ರೂ. ಮೌಲ್ಯದ ಲಾಟರಿ ಗೆದ್ದಿದ್ದಾರೆ. ಲಾಟರಿಯ ಹಣವನ್ನು ಪಡೆದ ಬಳಿಕ ಆ ಹಣದಲ್ಲಿ ತನ್ನ ಪತ್ನಿಗಾಗಿ ಕಲ್ಲಂಗಡಿ ಮತ್ತು ಹೂವುಗಳನ್ನು ಖರೀದಿಸಲು ನಿರ್ಧರಿಸಿದ್ದಾರೆ ಎಂದು ನೈನ್ ನ್ಯೂಸ್ ವರದಿ ಮಾಡಿದೆ.
ಅಮೇರಿಕಾದ ಕೊಲೊರಾಡೋದ ಮಾಂಟ್ರೋಸ್‌ನ ನಿವಾಸಿಯಾಗಿರುವ ವಾಲ್ಡೆಮರ್ ಟಿ ಎಂಬವರು “ಕೊಲೊರಾಡೋ ಲೊಟ್ಟೊ ಪ್ಲಸ್ ಹೆಸರಿನ ಜಾಕ್‌ಪಾಟ್ ಗೆದ್ದಿದ್ದಾರೆ. ಸೆಪ್ಟೆಂಬರ್ 6 ರಂದು ನಡೆದ ಡ್ರಾದಲ್ಲಿ ವಾಲ್ಡೆಮರ್ ಟಿ ಅವರಿಗೆ ಬಹುಮಾನ ಬಂದಾಗ ಅವರು ನಾಯಿಯ ಜೊತೆ ವಾಕ್ ಹೋಗಿದ್ದರು. ಬಹುಮಾನ ಗೆದ್ದ ಲಾಟರಿ ಟಿಕೇಟ್‌ನ ಸಂಖ್ಯೆ 2-19-20-34-36-37 ಎಂದು ವರದಿಯಲ್ಲಿ ತಿಳಿಸಲಾಗಿದೆ.
ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ವಾಲ್ಡೆಮರ್‌ನ್ನು ಸಂಪರ್ಕಿಸಿ ಫಸ್ಟ್ ರಿಯಾಕ್ಷನ್ ಏನೆಂದು ಕೇಳಿದಾಗ, ಅವರು ಅದನ್ನು ನಂಬಲು ರೆಡಿ ಇರಲಿಲ್ಲ. ಮತ್ತು ಯಾರೋ ತಪ್ಪು ಮಾಡಿರಬೇಕು ಎಂದು ಹೇಳಿದ್ದರು. ಬಹುಮಾನದಲ್ಲಿ 21.05 ಕೋಟಿಯನ್ನು ಕ್ಯಾಶ್ ರೂಪದಲ್ಲಿ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಲಾಟರಿಯಲ್ಲಿ ಬಂದ ಹಣವು ತನ್ನ ಹೆಂಡತಿಗೆ ಶಸ್ತ್ರಚಿಕಿತ್ಸೆ ನಡೆಸಲು ಸಹಾಯವಾಗುತ್ತೆ ಎಂದು ವಾಲ್ಡೆಮಾರ್ ಹೇಳಿದ್ದಾರೆ. ಇದರ ಜೊತೆ ಸ್ವಲ್ಪ ಹಣವನ್ನು ದಾನ ಮಾಡಲು ಉದ್ದೇಶಿಸಿದ್ದಾನೆ ಎಂದು ಹೇಳಿದ್ದಾರೆ.
ವಾಲ್ಡೆಮಾರ್ ಅವರಿಗೆ ವಯಸ್ಸು 77 ಆದ್ರೂ ಸಹ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಬೈಕಿಂಗ್ ಮತ್ತು ಟೆನಿಸ್ ಸಹ ಆಡುತ್ತಾರೆ. ಅವರು ಮತ್ತು ಅವರ ಪತ್ನಿ ಆರು ತಿಂಗಳ ಕಾಲ ಕೊಲೊರಾಡೋದಲ್ಲಿ ವಾಸಿಸಿದ್ರೆ ಮತ್ತು ವರ್ಷದ ಉಳಿದ ಆರು ತಿಂಗಳು ಅರಿಝೋನಾದಲ್ಲಿ ಕಳೆಯುತ್ತಾರೆ. ಇನ್ನು ವಯಸ್ಸಾದ ವ್ಯಕ್ತಿಯೊಬ್ಬರು ಲಾಟರಿ ಗೆದ್ದಿರುವುದು ಇದೇ ಮೊದಲೇನು ಅಲ್ಲ. ಜನವರಿಯಲ್ಲಿ, 88 ವರ್ಷದ ವ್ಯಕ್ತಿಯೊಬ್ಬರು 5 ಕೋಟಿ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ.