alex Certify ಆನ್​ಲೈನ್​​ನಲ್ಲಿ ಸೆಕೆಂಡ್​ ಹ್ಯಾಂಡ್​ ಫ್ರಿಡ್ಜ್​ ಖರೀದಿ ಮಾಡಿವನಿಗೆ ಕಾದಿತ್ತು ಭಾರೀ ಶಾಕ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್​ಲೈನ್​​ನಲ್ಲಿ ಸೆಕೆಂಡ್​ ಹ್ಯಾಂಡ್​ ಫ್ರಿಡ್ಜ್​ ಖರೀದಿ ಮಾಡಿವನಿಗೆ ಕಾದಿತ್ತು ಭಾರೀ ಶಾಕ್…​..!

ಆನ್​ಲೈನ್​​ನಲ್ಲಿ ಸೆಕೆಂಡ್​ ಹ್ಯಾಂಡ್​​ ಫ್ರಿಡ್ಜ್​​ ಖರೀದಿ ಮಾಡಿದ್ದ ವ್ಯಕ್ತಿ ಅದರ ಒಳಗೆ ಇದ್ದ 96,52,409 ಹಣ ಕಂಡು ಶಾಕ್​ ಆಗಿದ್ದಾನೆ. ದಕ್ಷಿಣ ಕೋರಿಯಾದಲ್ಲಿ ಘಟನೆ ಸಂಭವಿಸಿದ್ದು ಅನಿರೀಕ್ಷಿತವಾಗಿ ಬಂದ ಈ ಹಣವನ್ನು ಕಂಡು ಒಂದು ಕ್ಷಣ ಮೂಕವಿಸ್ಮಿತನಾಗಿದ್ದಾನೆ.

ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಜೆಜು ದ್ವೀಪದ ನಿವಾಸಿಗೆ ಈ ಹಣ ದೊರಕಿದ್ದು, ಇಷ್ಟು ದೊಡ್ಡ ಮೊತ್ತದ ಹಣವನ್ನು ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದು ಯಾರು ಅನ್ನೋದು ಆತನಿಗೂ ತಿಳಿದಿಲ್ಲವಂತೆ..!
ರೆಫ್ರಿಜರೇಟರ್​ನಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ದೊರಕಿರುವ ಬಗ್ಗೆ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು ತಾನು ಫ್ರಿಡ್ಜ್​ ಸ್ವಚ್ಛಗೊಳಿಸುವಾಗ ಈ ನಗದು ದೊರಕಿದೆ ಎಂದು ಮಾಹಿತಿ ನೀಡಿದ್ದಾನೆ.

ಭಾರೀ ಮೊತ್ತದ ಹಣವನ್ನು ಪ್ಲಾಸ್ಟಿಕ್​ ಕವರ್​ನ ಒಳಗೆ ಇಟ್ಟು ಅದನ್ನು ಫ್ರಿಡ್ಜ್​​ನಲ್ಲಿ ಇಡಲಾಗಿತ್ತು. ಈ ಹಣದ ಮಾಲೀಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಂದಹಾಗೆ ಈ ಹಣವನ್ನು ಉಳಿಸಿಕೊಳ್ಳಲು ಪ್ರಸ್ತುತ ಫ್ರಿಡ್ಜ್​ ಮಾಲೀಕನಿಗೆ ಇನ್ನೂ ಒಂದು ಅವಕಾಶವಿದೆ. ದಕ್ಷಿಣ ಕೋರಿಯಾದ ಲಾಸ್ಟ್​ & ಫೌಂಡ್​ ಆ್ಯಕ್ಟ್​ನ ಅಡಿಯಲ್ಲಿ ಮಾಲೀಕರ ಪತ್ತೆ ಸಾಧ್ಯವಾಗದೇ ಹೋದಲ್ಲಿ ಹಣವನ್ನು ಪತ್ತೆ ಮಾಡಿದವರಿಗೇ ಈ ಎಲ್ಲಾ ನಗದನ್ನು ನೀಡಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...