17 ಅಡಿಗಳಷ್ಟು ಎತ್ತರದ ಸಮರಬಳಕೆ ಯುದ್ಧ ಟ್ಯಾಂಕರ್‌ವೊಂದನ್ನು 38 ವರ್ಷ ವ್ಯಕ್ತಿಯು ಖರೀದಿಸಿದ್ದಾನೆ. ಅಂದರೆ, ಆತನಿಗೆ ಬ್ರಿಟಿಷರ ಕಾಲದ ಶಸ್ತ್ರಾಸ್ತ್ರಗಳ ಮೇಲೆ ಒಲವು ಇದೆ ಎನ್ನಲಾಗದು. ಯಾಕೆಂದರೆ ಟ್ಯಾಂಕರ್ ಅನ್ನು ಆತ ಟ್ಯಾಕ್ಸಿಯಾಗಿ ಸಂಚಾರ ಸೇವೆಗೆ ಬಿಟ್ಟಿದ್ದಾನೆ ! ಹೌದು , ಈ ಸಾಹಸ ಮಾಡಿದಾತ ಮರ್ಲಿನ್ ಬ್ಯಾಚೆಲರ್.
ಎಫ್‌ವಿ-432 ಎಂಬ ಟ್ಯಾಂಕರ್ ಮಾಡೆಲ್‌ವೊಂದನ್ನು ಮರ್ಲಿನ್ ಆನ್‌ಲೈನ್‌ನಲ್ಲಿ ವರ್ಷಕ್ಕೆ 25 ಸಾವಿರ ರೂ. ಗುತ್ತಿಗೆಗೆ ಪಡೆದಿದ್ದಾನೆ. ಬಳಿಕ ಆತನಿಗೆ ಟ್ಯಾಂಕರ್‌ನಿಂದ ಹಣ ಗಳಿಸುವ ಐಡಿಯಾ ತೋಚಿದೆ. ಕೇವಲ ತನ್ನ ಒಡಾಟಕ್ಕೆ ಮಾತ್ರವೇ ಇದನ್ನು ಬಳಸಿದರೆ, ಕೆಲವು ದಿನಗಳ ಬಳಿಕ ಬೋರ್ ಆಗಲಿದೆ. ಬದಲಿಗೆ ಟ್ಯಾಂಕರ್ ಅನ್ನು ಬಾಡಿಗೆಗೆ ಬಿಟ್ಟರೆ, ಬಹಳ ಆಕರ್ಷಣೆಯ ಕೇಂದ್ರವಾಗಲಿದೆ. ಜತೆಗೆ ಆದಾಯವು ಸಿಗಲಿದೆ ಎಂದು ಬೊಂಬಾಟ್ ಐಡಿಯಾ ಮಾಡಿದ್ದಾನೆ.
ವಿವಾಹದ ದಿನವೇ ವರ ಆಸ್ಪತ್ರೆ ಸೇರಿದ್ರೂ ನಡೆಯಿತು ಮದುವೆ..!
ಅದರಂತೆ ಸ್ಥಳೀಯ ಜಿಲ್ಲಾಡಳಿತದಿಂದ ಅನುಮತಿ ಪಡೆದು ಮದುವೆ ಸಮಾರಂಭಗಳಲ್ಲಿ ಮತ್ತು ಸಾವಿನ ಕಾರ್ಯಕ್ರಮಗಳಲ್ಲಿ ಮೆರವಣಿಗೆಗೆ ವಿಶೇಷ ವಾಹನವಾಗಿ ಸದ್ಯದ ಮಟ್ಟಿಗೆ ಟ್ಯಾಂಕರ್ ಬಳಸುತ್ತಿದ್ದಾನೆ. ರಸ್ತೆಗಳಲ್ಲಿ ಟಾಕ್ಸಿಯಂತೆ ಬಳಸಲು ಅಗತ್ಯವಾದ ಪರವಾನಗಿಯನ್ನು ಕೂಡ ಶೀಘ್ರವೇ ಗಳಿಸಲು ಮರ್ಲಿನ್ ಏರ್ಪಾಡು ಮಾಡಿದ್ದಾನೆ.
ಟ್ಯಾಂಕರ್ ಒಳಗೆ ಟಿವಿ, ಸ್ಟವ್ ಇದ್ದು, ಒಂದು ಬಾರಿಗೆ 9 ಮಂದಿ ಕೂರಬಹುದು. ಗಂಟೆಗೆ 59,500 ರೂ. ಬಾಡಿಗೆಗೆ ಟ್ಯಾಂಕರ್ ಟ್ಯಾಕ್ಸಿಯಾಗಿ ಲಭ್ಯವಾಗಲಿದೆ.