
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸುತ್ತಿದ್ದರೂ, ಭಾರತವು ಇನ್ನೂ ಮೂಢ ನಂಬಿಕೆಗಳು ಮತ್ತು ಆಚರಣೆಗಳಿಂದ ಮುಳುಗಿದೆ ಎಂಬುದಕ್ಕೆ ಅನೇಕ ಉದಾಹರಣೆ ದಿನನಿತ್ಯ ಸಿಗುತ್ತದೆ.
ಇತ್ತೀಚೆಗೆ, ಉತ್ತರ ಪ್ರದೇಶದ ಉನ್ನಾವೊದಲ್ಲಿ ವ್ಯಕ್ತಿಯೊಬ್ಬರು ಸಾಧುವೊಬ್ಬರ ಸಲಹೆಯ ಮೇರೆಗೆ 6 ಅಡಿಗಳಷ್ಟು ನೆಲದಡಿಯಲ್ಲಿ ಹೂತುಕೊಂಡಿದ್ದನು.
ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು ‘ಸಮಾಧಿ’ ತೆಗೆದುಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಆ ಸಾಧು ಯುವಕನಿಗೆ ಹೇಳಿದ್ದ. ಈ ವಿಷಯ ತಿಳಿದ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ರಕ್ಷಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್ ಆಗಿದೆ. ಆ ಯುವಕನನ್ನು ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿ ಎಂದು ಗುರುತಿಸಲಾಗಿದೆ.
ಉನ್ನಾವೋ ಜಿಲ್ಲೆಯ ತಾಜ್ಪುರ ಗ್ರಾಮದ ಮೂವರು ಧಾರ್ಮಿಕ ಅಚರಣೆಯಿಂದ ಹಣ ಗಳಿಸುವ ಉದ್ದೇಶದಿಂದ ಯುವಕನನ್ನು ಸಮಾಧಿ ಮಾಡಿಕೊಳ್ಳಲು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಮಾಧಿಯಾಗಿದ್ದ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
https://twitter.com/Saurabh_Unmute/status/1574694887332532224?ref_src=twsrc%5Etfw%7Ctwcamp%5Etweetembed%7Ctwterm%5E1574694887332532224%7Ctwgr%5Eb2d931c01d0aeba73d36e4d1f4a4184b50cce4ba%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-man-buries-himself-6-feet-under-ground-on-sadhus-advice-up-police-rescues-him-watch-5657001%2F