ಸಾಮಾನ್ಯವಾಗಿ ನೀರಿಗೆ ಇಳಿದಾಗ ಕಾಲಿಗೆ ಏನಾದರೂ ಸೋಕಿದರೆ ಹಾವಿರಬಹುದು ಎಂಬ ಆತಂಕದಲ್ಲಿ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಬೋರ್ಡಿಂಗ್ ಮಾಡುತ್ತಾ ಸಾಗರದಲ್ಲಿದ್ದ ಈ ಯುವಕನ ಎದುರು ಅಪರೂಪದ ಸಮುದ್ರ ಹಾವು ಪ್ರತ್ಯಕ್ಷವಾಗಿದೆ.
ನೀರಿನಲ್ಲಿ ಹರಿದುಕೊಂಡು ಸೀದಾ ಬೋರ್ಡ್ ಮೇಲೆ ಬಂದು ಮೂತಿ ಇಟ್ಟು, ಕ್ಷಣಮಾತ್ರದಲ್ಲಿ ಹಿಂದಿರುಗಿದ ಈ ಹಾವು ತನ್ನ ಸಂಗಾತಿಗಾಗಿ ಹುಡುಕುತ್ತಿತ್ತಂತೆ. ಬ್ರಾಡಿ ಮಾಸ್ಸ್ ಎಂಬಾತ ಈ ವಿಡಿಯೊವನ್ನು ಟ್ವಿಟರ್‍ನಲ್ಲಿ ಅಪ್‍ಲೋಡ್ ಮಾಡಿದ್ದಾನೆ. ನೀರಿನ ಮೇಲೆ ಬೋರ್ಡ್ ಹಾಕಿಕೊಂಡು ಬೋಟನ್ನು ಹಿಂಬಾಲಿಸುವ ‘ಪ್ಯಾಡೆಲ್ ಬೋರ್ಡಿಂಗ್’ ವಿದೇಶಗಳಲ್ಲಿ ಬಹಳ ಜನಪ್ರಿಯ ಸಾಹಸ.
ಸಾವಿಗೆ ಕಾರಣವಾಯ್ತು ಕುಷ್ಟ ರೋಗಿಗಳಿಗೆ ಹಾವು ಕಚ್ಚಲ್ಲ ಎಂಬ ಕುರುಡು ನಂಬಿಕೆ…!
ಇದಕ್ಕೂ ಮುನ್ನ ಬ್ರಾಡಿ ಹಂಚಿಕೊಂಡಿದ್ದ ವಿಡಿಯೊದಲ್ಲಿ ತಿಮಿಂಗಲಗಳು ಪ್ರತ್ಯಕ್ಷವಾಗಿ ಗಾಬರಿ ಮೂಡಿಸಿದ್ದವು.
https://www.youtube.com/watch?v=t4VIELhNVsI&feature=youtu.be