ಅಸ್ತಿತ್ವದಲ್ಲಿರುವ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದುಬಾರಿ ಕಾರುಗಳಲ್ಲಿ ಬುಗಾಟಿ ಚಿರಾನ್ ಒಂದು. ಇಂತಹ ಕಾರಿನ ಕ್ರಿಯಾಶೀಲ ರೆಪ್ಲಿಕಾವನ್ನು NHET ಟಿವಿ ಎಂದು ಕರೆಯಲ್ಪಡುವ ಜನಪ್ರಿಯ ಥಾಯ್ ಯೂಟ್ಯೂಬರ್ ತಯಾರಿಸಿದ್ದಾರೆ. ರೆಪ್ಲಿಕಾ ಸೂಪರ್‌ಕಾರ್‌ಗಳು ಕೆಲವೊಮ್ಮೆ ಮೂಲ ಕಾರುಗಳು ಪ್ರಮಾಣಾನುಗುಣಗಳನ್ನು ಹೊಂದುವುದೇ ಇಲ್ಲ. ಇದರಿಂದ ಕೆಲವೊಮ್ಮೆ ಇಡೀ ಕಾರಿನ ಅಥವಾ ವಾಹನದ ಲುಕ್ ಹದಗೆಡಬಹುದು. ಆದರೆ ಈ ಬುಗಾಟಿ ಚಿರಾನ್ ಪ್ರತಿಕೃತಿಯನ್ನು ಮೊದಲಿನಿಂದ ಅಂದರೆ ಸ್ಕ್ರಾಚ್ ನಿಂದ ಪ್ರತಿಯೊಂದು ಹಂತವನ್ನು ನಿರ್ಮಿಸಿರುವುದರಿಂದ ಇದಕ್ಕೆ ಈ ರೀತಿಯ ಯಾವುದೇ ಸಮಸ್ಯೆ ಇಲ್ಲ.
ಈ ಕಾರಿನ ಬಾಡಿವರ್ಕ್‌ನ ಹೆಚ್ಚಿನ ಭಾಗವನ್ನು ರೂಪಿಸಲು ಜೇಡಿಮಣ್ಣನ್ನು ಬಳಸಲಾಗಿದೆ, ವಿಭಿನ್ನ ವಿನ್ಯಾಸವನ್ನು ಅಧ್ಯಯನ ಮಾಡಲು ಸ್ಕೇಲ್ ಮತ್ತು ಪೂರ್ಣ-ಗಾತ್ರದ ಮಾದರಿಗಳನ್ನು ನಿರ್ಮಿಸುವಾಗ ಆಟೋಮೊಬೈಲ್ ನ ಮೂಲ ತಯಾರಕರು ಮಾಡಿದ ಆಯ್ಕೆಗಳು ಮತ್ತು ಕಲ್ಪನೆಗಳ ಜೊತೆಗೆ, ಬಳಸಿದ ವಿಧಾನವನ್ನು ಇದು ಹೋಲುತ್ತದೆ. ಇದು ಕೇವಲ ಸ್ಥಿರ ಕಲೆಯ ತುಣುಕಲ್ಲ. ಬದಲಿಗೆ ಈ ರೆಪ್ಲಿಕಾ ವಾಸ್ತವಾಗಿ ಕೆಲಸ ಮಾಡುವ ಯಂತ್ರವಾಗಿದೆ ಅಂದರೆ ನಂಬಲೆ ಬೇಕು.
ಹಿಜಾಬ್ ವಿವಾದ: ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಆರಂಭ; ಸಂವಿಧಾನದ ಪ್ರಕಾರ ವಿಚಾರಣೆ ನಡೆಸೋಣ ಎಂದ ನ್ಯಾಯಮೂರ್ತಿಗಳು
ಮೂಲ ಕಾರಿನಂತೆ, ಮೇಲ್ಭಾಗದಲ್ಲಿ ಲೇಯರ್ ಮಾಡಿದ ಜೇಡಿಮಣ್ಣನ್ನು ಬೆಂಬಲಿಸಲು ಉಕ್ಕಿನ ಚೌಕಟ್ಟನ್ನು ಬಳಸಲಾಗಿದೆ. ಕ್ಲೇ ಮಾಡೆಲಿಂಗ್ ಅನ್ನು ಪೂರ್ಣಗೊಳಿಸಲು ಅವರಿಗೆ ಎರಡು ವಾರಗಳು ಬೇಕಾಯಿತು. ಇಡೀ ಯೋಜನೆಯನ್ನು ಪೂರ್ಣಗೊಳಿಸಲು ಒಂದು ವರ್ಷ ಬೇಕಾಯಿತು.
ಮನೆಯಲ್ಲಿ ತಯಾರಿಸಿದ ಈ ಸೂಪರ್ ಕಾರಿಗೆ ಬುಗಾಟಿಯಂತೆಯೇ ಅದೇ ನೀಲಿ ಬಣ್ಣದಲ್ಲಿ ಫಿನಿಷಿಂಗ್ ಲುಕ್ ನೀಡಲಾಗಿದೆ. ಕಾರನ್ನು ಚಲಿಸುವಂತೆ ಮಾಡಲು ಯಾವ ರೀತಿಯ ಎಂಜಿನ್ ಬಳಸಲಾಗಿದೆ ಎಂಬುದು ತಿಳಿದಿಲ್ಲವಾದರೂ, ಅದು ಎಲ್ಲಾ ವಾಹನಗಳಂತೆ ಚಲಿಸುತ್ತದೆ. ಮೊದಲ ಬಾರಿಗೆ ಚಲಿಸುವ ಚಿರಾನ್ ರೆಪ್ಲಿಕಾ ನಿರ್ಮಿಸಿದ ಶ್ರೇಯಸ್ಸು NHET ಟಿವಿಗೆ ಸಲ್ಲುತ್ತದೆ. ಈ ಹಿಂದೆ ಇದೇ ತಂಡವು ಫೆರಾರಿ 488 GTB ನ ರೆಪ್ಲಿಕಾವನ್ನು ರಚಿಸಿತ್ತು. ಆದರೆ ಅದು ಚಿರಾನ್ ರೆಪ್ಲಿಕಾದಷ್ಟು ಯಶಸ್ವಿಯಾಗಿರಲಿಲ್ಲ.