ಮಂಡ್ಯ: ತೋಟದ ಮನೆಯಲ್ಲಿ ದರೋಡೆ ಮಾಡಲು ಬಂದು ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ.
ಮರ ಕತ್ತರಿಸುವ ಯಂತ್ರದಿಂದ ರಮೇಶ್(60) ಅವರನ್ನು ಕೊಲೆ ಮಾಡಲಾಗಿದೆ. ಸಂಜೆ 7 ಗಂಟೆಗೆ ತೋಟದ ಮನೆಗೆ ಬಂದಿದ್ದ ಅಪರಿಚಿತ ರಮೇಶನ ಪತ್ನಿ ಯಶೋದಮ್ಮರನ್ನು ಮಾತನಾಡಿಸಿದ್ದಾನೆ. ನಿಮ್ಮ ಮನೆಗೆ ಮರ ಕತ್ತರಿಸುವ ಯಂತ್ರ ಬಂದಿದೆ. ನಿಮ್ಮ ಮನೆಯವರೇ ಯಂತ್ರವನ್ನು ಬುಕ್ ಮಾಡಿದ್ದಾರೆ ಎಂದು ಹೇಳಿದ್ದಾನೆ.
ನಾವು ಯಾರೂ ಆರ್ಡರ್ ಮಾಡಿಲ್ಲ ಎಂದು ಯಶೋದಮ್ಮ ಹೇಳಿದ್ದು, ಯಂತ್ರವನ್ನು ಆನ್ ಮಾಡಿ ಯಶೋದಮ್ಮನವರ ಕುತ್ತಿಗೆಗೆ ಹಿಡಿದಿದ್ದಾನೆ. ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಮನೆಯ ಒಳಗೆ ಹೋಗಿ ರಮೇಶ್ ನನ್ನು ಮರ ಕತ್ತರಿಸುವ ಯಂತ್ರದಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಎಚ್ಚರವಾಗಿ ಯಶೋದಮ್ಮ ಬಾಗಿಲು ಲಾಕ್ ಮಾಡಿದ್ದಾರೆ. ಸ್ಥಳೀಯರನ್ನು ಕೂಗಿ ಕರೆದಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯರು ಕೊಲೆ ಆರೋಪಿಗೆ ಧರ್ಮದೇಟು ನೀಡಿದ್ದಾರೆ. ಗಾಯಾಳು ಯಶೋದಮ್ಮ ಅವರನ್ನು ಮೈಸೂರಿನ ಖಾಸಗಿ ಮಕ್ಕಳಿಗೆ ದಾಖಲಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.