ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ವೈದ್ಯನೊಬ್ಬ ಬೀದಿ ನಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾಹಿತಿಯ ಪ್ರಕಾರ, ಗ್ವಾಲಿಯರ್‌ನ ಡಬ್ಬಾ ಸಿಮಾರಿಯಾದಲ್ಲಿ ಘಟನೆ ನಡೆದಿದೆ.
ಬಂಗಾಳಿ ವೈದ್ಯನ ಮಗನಿಗೆ ನಾಯಿ ಕಚ್ಚಿದೆ. ಘಟನೆ ನಡೆದ ನಂತ್ರ ಆರೋಪಿ ನಿರಂತರವಾಗಿ ನಾಯಿಗಾಗಿ ಹುಡುಕಾಟ ನಡೆಸುತ್ತಿದ್ದ. ನಾಯಿ ಪತ್ತೆಯಾದ ನಂತರ, ಆರೋಪಿ ನಾಯಿಯನ್ನು ನಿರ್ದಯವಾಗಿ ಥಳಿಸಿ ನಂತರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನಾಯಿಯನ್ನು ತುಂಡು-ತುಂಡಾಗಿ ಕತ್ತರಿಸಿದ್ದಾನೆ. ಬರ್ಬರವಾಗಿ ನಡೆದ ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈದ್ಯನ ಮಗನಿಗೆ ಗಂಭೀರ ಗಾಯವಾಗಿತ್ತು ಎನ್ನಲಾಗಿದೆ. ಘಟನೆ ನಡೆದ ಮರುದಿನ ಗ್ರಾಮದ ಸರ್ಕಾರಿ ಶಾಲೆಯ ಹಿಂದೆ ಈ ಬೀದಿನಾಯಿ ಪತ್ತೆಯಾಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಆರೋಪಿಯನ್ನು ತಕ್ಷಣ ಬಂಧಿಸುವಂತೆ ಪ್ರತಿಭಟನೆ ಕೂಡ ನಡೆದಿದೆ. ತಕ್ಷಣವೇ ನಾಯಿಯನ್ನು ಬರ್ಬರವಾಗಿ ಕೊಂದ ವೈದ್ಯರ ವಿರುದ್ಧ ಪೊಲೀಸರು ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.