ಮೂರು ವರ್ಷಗಳ ನಂತರ ತಮ್ಮ ಪೋಷಕರೊಂದಿಗೆ ಮತ್ತೆ ಒಂದಾಗುತ್ತಿರುವ ಸಹೋದರನ ಭಾವನಾತ್ಮಕ ಸನ್ನಿವೇಶದ ವಿಡಿಯೋವನ್ನು ಸಂಜರಿ ಹರಿಯ ಎಂಬುವರು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಮಗನನ್ನು ನೋಡಿದ ನಂತರ ಪೋಷಕರ ಪ್ರತಿಕ್ರಿಯೆಯು ಖಂಡಿತವಾಗಿಯೂ ಹೃದಯವನ್ನು ಬೆಚ್ಚಗಾಗಿಸುತ್ತೆ ಮತ್ತು ನಿಮ್ಮಲ್ಲೂ ಕಣ್ಣೀರು ತರಿಸಬಹುದು.
ಸಂಜರಿ ತನ್ನ ಸಹೋದರನನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ಹೋಗುವುದರೊಂದಿಗೆ ವೈರಲ್ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ಒಡಹುಟ್ಟಿದವರು ತಮ್ಮ ಪೋಷಕರನ್ನು ಅಚ್ಚರಿಗೊಳಿಸಲು ಮನೆಗೆ ತೆರಳಿದ್ದಾರೆ.
ಬಹಳ ಸಮಯದ ನಂತರ ತನ್ನ ಮಗನನ್ನು ನೋಡಿದ ಸಂಜರಿಯ ತಾಯಿ ಅಯ್ಯೋ ದೇವರೇ ಎಂದು ಕೂಗುತ್ತಾ ಕಣ್ಣೀರಿಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ಅವರ ತಂದೆ ಗಮನಿಸಿದ್ದು, ಅವರು ಕೂಡಾ ಒಂದು ಕ್ಷಣ ತಮ್ಮನ್ನು ತಾವೇ ನಂಬದಂತಾಗಿದ್ದಾರೆ. ಸ್ವಲ್ಪ ಸಮಯದ ನಂತರ ವಾಸ್ತವ ಅರಿತು ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮಗನ ಹಣೆಯ ಮೇಲೆ ಸಿಹಿ ಮುತ್ತು ನೀಡಿದ್ದಾರೆ.
ನನ್ನ ಸಹೋದರ 3 ವರ್ಷಗಳ ನಂತರ ಮನೆಗೆ ಬಂದಿದ್ದಾನೆ. ಮತ್ತು ಅವನು ಬರಲಿರುವ ಬಗ್ಗೆ ನನ್ನ ಹೆತ್ತವರಿಗೆ ಯಾವುದೇ ಸುಳಿವು ಇರಲಿಲ್ಲ. ನಾವು ಇಂದು ಸಾಕಷ್ಟು ಕಣ್ಣೀರು ಸುರಿಸಿದ್ದೇವೆ ಎಂದು ಸಂಜರಿ ಶೀರ್ಷಿಕೆ ನೀಡಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೊ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕ್ಲಿಪ್ ವೀಕ್ಷಿಸಿದ ನಂತರ ನೆಟಿಜನ್‌ಗಳು ಭಾವುಕರಾಗಿದ್ದು, ತಮ್ಮ ಅಭಿಪ್ರಾಯ ನೀಡಿದ್ದಾರೆ.