ಲೂಸಿಯಾನಾ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಈಜಿ ದಡ ಸೇರುವಂತಹ ದೃಶ್ಯವನ್ನು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನೋಡಿರುತ್ತೇವೆ ಇಲ್ಲ ಕೇಳಿರುತ್ತೇವೆ. ಆದರೆ ಇಲ್ಲೊಂಡೆದೆ ಟ್ರಾಫಿಕ್ ಜಾಮ್ ಗೆ ಬೇಸತ್ತ ಭೂಪನೊಬ್ಬ ಮೊಸಳೆಗಳು ತುಂಬಿಕೊಂಡಿರುವ ನದಿಗೆ ಧುಮುಕಿದ್ದಾನೆ.
ಹೌದು, ಈ ಘಟನೆ ನಡೆದಿರುವುದು ಅಮೆರಿಕಾದ ಲೂಸಿಯಾನಾದಲ್ಲಿ. ಕಾರುಗಳ ಮಧ್ಯೆ ಉಂಟಾದ ಅಪಘಾತದಿಂದಾಗಿ ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಬೇಸತ್ತ ಜಿಮ್ಮಿ ಇವಾನ್ ಜೆನ್ನಿಂಗ್ಸ್ ಎಂಬಾತ ಮೊಸಳೆಗಳಿದ್ದ ನದಿಗೆ ಹಾರಿದ್ದಾನೆ. ಈ ಮೂಲಕ ಈಜಿ ನದಿ ದಾಟಿ ತನ್ನ ಗೆಳೆಯನ ಕಾರಿನಲ್ಲಿ ಪ್ರಯಾಣಿಸಬಹುದು ಅನ್ನೋದು ಈತನ ಪ್ಲ್ಯಾನ್ ಆಗಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವಾಗಿ ಪೊಲೀಸರ ಅತಿಥಿಯಾಗಿದ್ದಾನೆ.
ಮಗುವನ್ನು ರಕ್ಷಿಸಲು ಕಟ್ಟಡದಿಂದ ಕೆಳಕ್ಕೆ ಎಸೆದ ಮಹಿಳೆ: ವಿಡಿಯೋ ವೈರಲ್
ಆದರೆ ಈತನಿಗೆ ನದಿಯಲ್ಲಿ ಮೊಸಳೆಗಳಿರುವುದು ತಿಳಿದಿರಲಿಲ್ಲ. ಅಂತಿಮವಾಗಿ ಈತ ಒಂದು ಸಣ್ಣ ದ್ವೀಪದತ್ತ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾನೆ. ಕೂಡಲೇ ಆತನನ್ನು ಪೊಲೀಸರು ಬಂಧಿಸಿದರು.
ಜಿಮ್ಮಿ ಹೇಳುವ ಪ್ರಕಾರ ‘’ನೀರಿಗೆ ಬಿದ್ದ ಕೂಡಲೇ ರಪ್ ಅಂತ ಬಾಯಿಗೆ ನೀರು ಹೊಡೆದಿದೆ. ಜತೆಗೆ ಎಡಗೈಗೆ ನೋವು ಆಗಿದೆ. ನಾನು ದಡಕ್ಕೆ ಈಜಲು ಪ್ರಯತ್ನಿಸಿದೆ ಒಂದುವರೆ ಗಂಟೆ ಕಾಲ ಈಜಿದ್ದರಿಂದ ತುಂಬಾ ಆಯಾಸಗೊಂಡಿದ್ದೆ. ಅಯ್ಯೋ ದೇವರೆ ನನ್ನದು ಮೂರ್ಖತನದ ಕಲ್ಪನೆಯಾಯಿತು ಎಂದೆನಿಸಿತು’’ ಎಂದು ಹೇಳಿದ್ದಾನೆ.