ಓಯೋ ಮೂಲಕ ಪಾಂಡಿಚೆರಿಯಲ್ಲಿ ರೂಂ ಬುಕ್ ಮಾಡಿದ ವ್ಯಕ್ತಿಯೊಬ್ಬರಿಗೆ ಭಾರೀ ಆಘಾತ ಕಾದಿತ್ತು. ಪಾಂಡಿಚೆರಿಯಲ್ಲಿ ತಾವು ರೂಂ ಬುಕ್ ಮಾಡಿದ ಸ್ಥಳ ತಲುಪಿದಾಗ ವಾಸ್ತವದಲ್ಲಿ ಆ ಕೋಣೆಯೇ ಇಲ್ಲವೆಂದು ತಿಳಿದು ಬಂದಿದೆ.
ಲಿಂಕ್ಡಿನ್‌ನಲ್ಲಿ ತಮಗಾದ ಈ ಅನುಭವ ಹಂಚಿಕೊಂಡ ಅಭಿಶಾಂತ್ ಪಂತ್, “ಓಯೋದಲ್ಲಿ ವಾಸ್ತವ್ಯದ ಭಯಂಕರ : ಕಳೆದ ರಾತ್ರಿ 24 ಡಿಸೆಂಬರ್‌ನಲ್ಲಿ ನನಗೆ ಆತಿಥ್ಯ ಕ್ಷೇತ್ರದ ಅತ್ಯಂತ ಕೆಟ್ಟ ಅನುಭವವಾಗಿದೆ,” ಎಂದು ತಿಳಿಸಿದ್ದಾರೆ.
ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಈ ಹೃದಯಸ್ಪರ್ಶಿ ವಿಡಿಯೋ
ಈ ಪೋಸ್ಟ್‌ಅನ್ನು ಓದಿದ ಓಯೋ ಸಿಇಓ ರೋಹಿತ್ ಕಪೂರ್ ಕೂಡಲೇ ಕ್ಷಮೆಯಾಚಿಸಿದ್ದು, “ನೀವು ಮತ್ತು ನಿಮ್ಮ ಸಮೂಹಕ್ಕೆ ಆದ ಅನುಭವಕ್ಕೆ ನಾನು ಮೊದಲಿಗೆ ಷರತ್ತುರಹಿತವಾದ ಕ್ಷಮೆಯಾಚಿತ್ತೇನೆ. ಇದು ನಮ್ಮ ಗುಣಮಟ್ಟದಲ್ಲಿ ಇಲ್ಲದೇ ಇರುವ ಸಂಗತಿಯಾಗಿದ್ದು, ನಾವೀಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ತನಿಖೆ ಆರಂಭಿಸಿದ್ದೇವೆ. ದಯವಿಟ್ಟು ನೀವು ಅಥವಾ ನಿಮ್ಮ ಸಹವರ್ತಿಗಳು ನನಗೆ ಡಿಎಂ ಮಾಡಿ, ನಾನು ನಿಮ್ಮೊಂದಿಗೆ ಸಂಪರ್ಕದಲ್ಲಿದ್ದು, ನಿಮ್ಮ ಅನುಭವದಿಂದ ಹೆಚ್ಚು ಕಲಿಯಲು ಇಚ್ಛಿಸುತ್ತೇನೆ. ಈ ಸಮಸ್ಯೆಯನ್ನು ನಾವು ನಿಮಗಾಗಿ ಮತ್ತು ನಮ್ಮ ಪ್ರತಿಯೊಬ್ಬ ಗ್ರಾಹಕರಿಗೂ ಬಗೆಹರಿಸಲು ಬದ್ಧರಾಗಿದ್ದೇವೆ,” ಎಂದು ತಿಳಿಸಿದ್ಧಾರೆ.
ತಾವು ಬುಕ್ ಮಾಡಿದ ರೂಂ ಅನ್ನು ಹುಡುಕಿ ಬಂದಾಗ ಪಂತ್ ಹಾಗೂ ಅವರೊಂದಿಗೆ ಬಂದಿದ್ದ ಒಂಬತ್ತು ಮಂದಿ ನಿರ್ಜನ ಪ್ರದೇಶವೊಂದರಲ್ಲಿ ಬಂದು ನಿಂತಿದ್ದಾರೆ. ಅಲ್ಲಿ ಓಯೋನ ಯಾವುದೇ ರೂಂ ಇರಲಿಲ್ಲ.