alex Certify ಬಿಜೆಪಿ ಮುಖಂಡ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಮುಖಂಡ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ

ಅದಯ ಗುಜರಾತಿನ ನರ್ಮದಾ ನದಿ ತೀರದ ಭರೂಚ್‌ ಜಿಲ್ಲೆಯ ಅಂಕ್ಲೇಶ್ವರ ನಗರ. ಅಖಿಲ ಭಾರತೀಯ ಸಂತ ಸಮಿತಿ ಆಯೋಜಿಸಿದ್ದ ಜನಪದ ಗೀತೆಗಳ ಗಾಯನ ಕಾರ್ಯಕ್ರಮದ ರಸಸಂಜೆ ಜೋರಾಗಿ ನಡೆದಿತ್ತು. ‘ಲೋಕ್‌ ದಾಯ್ರೊ’ ಎಂದು ಕರೆಯಲಾಗುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್‌. ಪಾಟೀಲ್‌ ಭಾಗವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ಪಾಟೀಲ್‌ ಅವರನ್ನು ಕಂಡ ಕೂಡಲೇ ಒಬ್ಬ ವ್ಯಕ್ತಿ ಸಂತಸದ ಉತ್ಕಟಕ್ಕೆ ತಲುಪಿ ತನ್ನ ಬಳಿಯಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ..!

ಹೌದು, ಇದು ಗಣ್ಯರಿಗೆ ನೀಡಲಾಗುವ ಸ್ವಾಗತದ ಪರಿಯಂತೆ. ಉತ್ತರ ಭಾರತದಲ್ಲಿ ಮದುವೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂಥ ಆಚರಣೆ ಇದೆ. ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಷ್ಠೆ ಮೆರೆಯುವ ಜಮೀನುದಾರಿಕೆ, ನಗರದ ಶ್ರೀಮಂತ ಕುಟುಂಬಗಳ ಪ್ರಾಬಲ್ಯದ ಸಂಕೇತ ಎಂದು ಈ ಆಚರಣೆಯನ್ನು ಕರೆಯಲಾಗುತ್ತದೆ.

ಆದರೆ, ಅಂಕ್ಲೇಶ್ವರ್‌ನಲ್ಲಿ ನಡೆದ ಗಾಳಿಯಲ್ಲಿ ಗುಂಡು ಘಟನೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಹಂತಕ್ಕೆ ತಲುಪಿದೆ. ಬಂದೂಕಿನಿಂದ ಗುಂಡು ಹಾರಿಸಿದವ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಜತೆಗೆ ಬಿಜೆಪಿ ಮುಖಂಡನ ಸಹಚರ ನೋಟುಗಳನ್ನು ವೇದಿಕೆ ಮೇಲೆ ಚೆಲ್ಲಾಡಿದ್ದಾನೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್‌ ಆಗಿದ್ದು, ಭಾರಿ ಆಕ್ಷೇಪ ವ್ಯಕ್ತವಾಗಿದೆ. ಜಾಮ್‌ನಗರದ ವಿಕ್ರಮ್‌ ಶಿಯಾಲಿಯಾ ಎಂಬಾತ ಗುಂಡು ಹಾರಿಸಿದವ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಆತನ ವಿರುದ್ಧ ಎಎಸ್‌ಐ ಹರಮ್‌ಸಿಂಗ್‌ ಜಯವೀರ್‌ಸಿಂಗ್‌ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಮುಖಂಡ ಕಾರ್ಯಕ್ರಮದಿಂದ ತೆರಳಿದ ನಂತರ ಘಟನೆ ನಡೆದಿದೆ. ಹಾಗಾಗಿ ಅವರ ವಿರುದ್ಧ ಪ್ರಕರಣವಿಲ್ಲ ಎಂದು ಪೊಲೀಸರು ನೆಪ ಹೇಳುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...