ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ 10 ವರ್ಷದ ಮಗು ತಂದೆಯ ಎದುರಿಗೆ ನಿಂತುಕೊಂಡು ಆತನ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದೆ.
ಕೋಪಗೊಂಡ 30 ವರ್ಷದ ತಂದೆ, ಕಬ್ಬಿಣ ಸರಳಿನಿಂದ ಮಗುವಿನ ತಲೆಗೆ ಬಡಿದಿದ್ದಾನೆ. ಅಲ್ಲಿಯೇ ಕುಸಿದುಬಿದ್ದು ಮಗು ಮೃತಪಟ್ಟಿದೆ. ಇಷ್ಟೇ ಆಗಿದ್ದರೆ, ಇದೊಂದು ಸಾಮಾನ್ಯ ಕೊಲೆ ಅನಿಸುತ್ತಿತ್ತೇನೊ. ಆದರೆ ಮಗುವಿನ ಶವವನ್ನು ಹೂಳಲು ಪಾಪಿ ತಂದೆಗೆ ಸಾಥ್ ಕೊಟ್ಟಿದ್ದು ಪತ್ನಿ ಮತ್ತು ಆತನ ಗರ್ಲ್‌ಫ್ರೆಂಡ್!
ಹೌದು, ಸ್ವಹಿತಾಸಕ್ತಿ ಮತ್ತು ಕಾಮದ ಅಮಲು ಹೇಗಿರುತ್ತೇ ನೋಡಿ. ಪಾಪಿ ತಂದೆಯ ಹೆಸರು ಸಚಿನ್ ಕುಮಾರ್, ಪತ್ನಿ ಸಿಂಧು ಹಾಗೂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಗರ್ಲ್‌ಫ್ರೆಂಡ್ ನಾದಿಯಾ.
ಫೆಬ್ರುವರಿ 7ರಂದು ನಾದಿಯಾ ಮತ್ತು ಸಚಿನ್ ಮನೆಯಲ್ಲಿ ಒಟ್ಟಿಗೆ ಇದ್ದಾಗ ಮಗುವು ಎದುರಿಗೆ ಬಂದು ಪ್ರಶ್ನೆ ಮಾಡಿದೆ. ಅದಕ್ಕೆ ಕೋಪಗೊಂಡ ಸಚಿನ್ ಸರಳಿನಿಂದ ಬಾರಿಸಿದ್ದಾನೆ. ರಕ್ತದ ಮಡುವಿನಲ್ಲಿ ಮಗುವು ಸತ್ತು ಬಿದ್ದಿದೆ. ಕೆಲವು ಗಂಟೆಗಳ ಬಳಿಕ ಮಗುವಿನ ತಾಯಿ ಸಿಂಧು ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಆಘಾತದಿಂದ ಪ್ರಜ್ಞೆ ತಪ್ಪಿದ್ದಾಳೆ. ಆಕೆಯನ್ನು ಸಂತೈಸಿ, ಮಗುವಿನ ಸಾವಿನ ವಿಷಯ ಮುಚ್ಚಿಡುವಂತೆ ಸಚಿನ್, ನಾದಿಯಾ ಒಪ್ಪಿಸಿದ್ದಾರೆ. ಇನ್ನೆಂದೂ ಕೂಡ ಅವರು ಭೇಟಿಯಾಗಲ್ಲ ಎಂಬ ಪ್ರಮಾಣವನ್ನು ಸಿಂಧು ಎದುರು ಮಾಡಿದ್ದಾರೆ.
73ರಲ್ಲೂ ಸಲೀಸಾಗಿ ಸ್ಕೇಟಿಂಗ್ ಮಾಡುವ ಚಿರುತ್ಸಾಹಿ
ಬಳಿಕ ಮೂವರು ಕಾರಿನಲ್ಲಿ ಮಗುವಿನ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಕೊಂಡು ತಮಿಳುನಾಡಿನ ಬಾರ್ಗೂರು ಬಳಿಯ ಕಾಡಿಗೆ ಒಯ್ದು ಹೂತಿದ್ದಾರೆ. ಸಿಂಧು ಮನೆಯವರು ನಾಪತ್ತೆಯಾದ ಮಗುವಿನ ಬಗ್ಗೆ ಪೊಲೀಸ್ ದೂರು ದಾಖಲಿಸುವಂತೆ ಹಲವು ಬಾರಿ ಒತ್ತಾಯಿಸಿದಾಗ ಅನಿವಾರ್ಯವಾಗಿ ಸಚಿನ್ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಫೆಬ್ರುವರಿಯಲ್ಲಿ ಕಾಣೆಯಾದ ಮಗುವಿನ ಬಗ್ಗೆ ಆಗಸ್ಟ್‌ನಲ್ಲಿ ದೂರು ಕೊಡಲು ತಂದೆ ಬಂದಿರುವುದರಿಂದ ಪೊಲೀಸರಿಗೆ ಅನುಮಾನಗೊಂಡು ಗದರಿಸಿದಾಗ ಹತ್ಯೆಯ ಸಂಚು ಬಯಲಾಗಿದೆ.