
ಮಾನವರಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವ ತಾಳ್ಮೆಯ ಮಟ್ಟಗಳನ್ನು ನೋಡಬೇಕೆಂದರೆ ನಾವು ಸಂಚಾರಿ ಸಿಗ್ನಲ್‌ಗಳು ಹಾಗೂ ಕಾರ್ ಪಾರ್ಕಿಂಗ್ ಸ್ಥಳಗಳನ್ನು ನೋಡಬೇಕಾಗುತ್ತದೆ.
ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನ್ಯೂಯಾರ್ಕ್‌ನ ಸನ್ನಿಸೈಡ್ ಕ್ವೀನ್ಸ್ ಪ್ರದೇಶದಲ್ಲಿ ಜನರು ಪಾರ್ಕಿಂಗ್ ಸ್ಥಳಕ್ಕಾಗಿ ಕಚ್ಚಾಡುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋವನ್ನು @ಫೈಟ್‌ಹೆವನ್ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಅದೀಗ ಭಾರೀ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಕೆಲ ಹೆಂಗಸರು ಹಾಗೂ ಒಬ್ಬ ಪುರುಷನಿಂದ ಹಲ್ಲೆಗೊಳಗಾಗಿದ್ದು, ಅರ್ಧ ಜೀವವಾಗಿ ನೆಲಕ್ಕೆ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಚಾಕು ಹಾಗೂ ಬೇಸ್‌ಬಾಲ್ ಬ್ಯಾಟ್‌ನಿಂದ ಈತನ ಮೇಲೆ ಸತತ ಹಲ್ಲೆಗಳಾಗಿವೆ. ಮಹಿಳೆಯೊಬ್ಬಳು ಆತನಿಗೆ ಬೇಸ್‌ಬಾಲ್ ಬ್ಯಾಟ್‌ನಿಂದ ದಾಳಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವ್ಯಕ್ತಿಗೆ ಐದು ಬಾರಿ ಚಾಕುವಿನಿಂದ ಇರಿಯಲಾಗಿದೆ ಎಂದು ಟ್ವಿಟ್‌ನಲ್ಲಿ ತಿಳಿಸಲಾಗಿದೆ. ಈ ಹಲ್ಲೆಗಳಿಂದ ಮೆದುಳಿಗೆ ಗಾಯಗೊಂಡ ಕಾರಣ ಈ ವ್ಯಕ್ತಿಯನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ. ಘಟನೆ ಸಂಬಂಧ ಮುಂದೇನಾಗಿದೆ ಎಂದು ವರದಿಯಾಗಿಲ್ಲ.
:quality(70)/cloudfront-us-east-1.images.arcpublishing.com/tronc/5UKMNF23HZCLND2DJBZ3RLLSJI.jpg)