ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಅಮನ್ ಎಂಬ ವ್ಯಕ್ತಿ ವಿಶ್ವಕ್ಕೆ ತನ್ನ ಅಂತಿಮ ವಿದಾಯವನ್ನು ಹೇಳುತ್ತಿರುವ ಪೋಸ್ಟ್ ಒಂದು ವೈರಲ್ ಆಗಿದ್ದು, ಜನರನ್ನು ಭಾವುಕರನ್ನಾಗಿಸುತ್ತದೆ.
ಮಾರ್ಕ್ ಸ್ಟೋಕ್ಸ್ ಎಂಬ ವ್ಯಕ್ತಿ ಈ ಸಂದೇಶವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಹಾಯ್ ಜನರೇ, ನಾನು ವಿದಾಯ ಹೇಳುವ ಸಮಯ ಬಂದಿದೆ. ಇದರಿಂದ ನಾನು ಹೆದರುತ್ತಿದ್ದೇನೆ. ನಾನು ಕಳೆದ 2 ವರ್ಷಗಳಿಂದ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದೇನೆ, ಆದರೆ ಈಗ ಕೆಲವೇ ದಿನಗಳು ಉಳಿದಿವೆ. ಅದ್ಭುತ ಜನರಿಗೆ ಧನ್ಯವಾದಗಳು, ನನ್ನ ಹೃದಯದಲ್ಲಿ ತುಂಬಾ ಪ್ರೀತಿಯೊಂದಿಗೆ ನಾನು ಈ ಹುಚ್ಚು ಜಗತ್ತನ್ನು ಬಿಡುತ್ತೇನೆ“ ಎಂದು ಮಾರ್ಕ್ ಸ್ಟೋಕ್ಸ್ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ.
ಹೃದಯ ವಿದ್ರಾವಕ ಟ್ವೀಟ್ ಓದಿದ ನೆಟ್ಟಿಗರು ಕಣ್ಣೀರಾಗಿದ್ದಾರೆ. ನಿರಾಶರಾಗಬೇಡಿ, ಜೀವಿಸುವ ಸಾಧ್ಯತೆಗಳೂ ಇವೆ ಎಂದು ಹಲವರು ಮಾರ್ಕ್ಗೆ ಧೈರ್ಯ ತುಂಬಿದ್ದರೆ, ಮತ್ತೆ ಕೆಲವರು ಕಣ್ಣೀರಿನ ಇಮೋಜಿಯೊಂದಿಗೆ ಮೌನಕ್ಕೆ ಜಾರಿದ್ದಾರೆ. ತನ್ನ ಮಕ್ಕಳ ಜತೆ ನಗುತ್ತಿರುವ ಫೋಟೋ ಅನ್ನು ಅವರು ಶೇರ್ ಮಾಡಿರುವುದು ಇನ್ನಷ್ಟು ದುಃಖಕ್ಕೆ ಕಾರಣವಾಗಿದೆ.