ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗುವ ಅದೆಷ್ಟೋ ಸನ್ನಿವೇಶವನ್ನ ನೀವು ನೋಡಿದ್ದೀರಾ. ಅಂಥದ್ದೇ ಒಂದು ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಕಟ್ಟಡದಿಂದ ಬೀಳುವ ಇಟ್ಟಿಗೆಗಳಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಗುವಾಂಗ್‌ಡಾಂಗ್ ಪ್ರಾಂತ್ಯದ ಹೆಯುವಾನ್‌ನಲ್ಲಿ ಘಟನೆ ನಡೆದಿದೆ.
ವ್ಯಕ್ತಿ ಅಂಗಡಿಯೊಂದರ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಇಟ್ಟಿಗೆಗಳು ಕೆಳಗೆ ಬಿದ್ದವು. ಸ್ವಲ್ಪ ಸಮಯ ಹೆಚ್ಚು ಕಮ್ಮಿಯಾಗಿದ್ರೂ ಇಟ್ಟಿಗೆಗಳು ಆತನ ತಲೆಯ ಮೇಲೇ ಬೀಳುತಿದ್ವು. ಆದರೆ ಮೇಲಿಂದ ಬಿದ್ದ ಇಟ್ಟಿಗೆಗಳು ಅವರ ಮುಂದೆ ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಮಹಡಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಕಾರ್ಮಿಕರ ಅಸಮರ್ಪಕ ಕಾರ್ಯಾಚರಣೆಯಿಂದ ಇಟ್ಟಿಗೆಗಳು ಕೆಳಗೆ ಬಿದ್ದಿವೆ ಎಂದು ವರದಿಯಾಗಿದೆ. ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿರುವ ವ್ಯಕ್ತಿ ಕಾಮಗಾರಿ ನಡೆಸುತ್ತಿದ್ದ ಕಂಪನಿಯೊಂದಿಗೆ ಖಾಸಗಿಯಾಗಿ ರಾಜಿ ಮಾಡಿಕೊಂಡಿದ್ದು ಯಾವುದೇ ದೂರು ದಾಖಲಾಗಿಲ್ಲ.