ನವದೆಹಲಿ : ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್ ನ ಹೊರಗೆ ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕೋರ್ಟ್ ನ ಹೊರಗೆ ಜನರು ಹಾಗೂ ಪೊಲೀಸರು ಕೂಡ ಇದ್ದರು. ಈ ಸಂದರ್ಭದಲ್ಲಿ ಬಂದ 50 ವರ್ಷದ ವ್ಯಕ್ತಿಯೊಬ್ಬರು ನಾನು ಬಡವನಿದ್ದೇನೆ. ನಾವು ಕುಟುಂಬಸ್ಥರೆಲ್ಲರೂ ಹಸಿವಿನಿಂದ ಬಳಲುತ್ತಿದ್ದೇವೆ ಎನ್ನುತ್ತ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಈ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಅತ್ತಿದ್ದಾನೆ.
ಕೂಡಲೇ ಧಾವಿಸಿದ ಪೊಲೀಸರು ಬೆಂಕಿ ಆರಿಸುವ ಪ್ರಯತ್ನಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಹದ ಹಲವು ಭಾಗಗಳು ಸುಟ್ಟಿವೆ ಎನ್ನಲಾಗಿದ್ದು, ಆತ ಬೆಂಕಿ ಹಚ್ಚಿಕೊಂಡಿದ್ದಕ್ಕೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.
ಈ ಘಟನೆಯನ್ನು ಅಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದರಲ್ಲಿ ಆ ವ್ಯಕ್ತಿ ನೆಲಕ್ಕೆ ಬಿದ್ದು ಅತ್ತಿದ್ದು ಮಾತ್ರ ಸೆರೆಯಾಗಿದೆ.