alex Certify ಗಾಂಜಾ ಸೇವಿಸಿ ವಾಹನ ಚಾಲನೆ; ಪೊಲೀಸರಿಂದ ಹೀಗೊಂದು ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಂಜಾ ಸೇವಿಸಿ ವಾಹನ ಚಾಲನೆ; ಪೊಲೀಸರಿಂದ ಹೀಗೊಂದು ಸಲಹೆ

ದೆಹಲಿ ಪೊಲೀಸರು ಉತ್ತಮ ಸಲಹೆಗಳನ್ನು ಚಮತ್ಕಾರದ ರೀತಿಯಲ್ಲಿ ನೀಡಲು ಹಾಗೂ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮದ ಮೊರೆ ಹೋಗುತ್ತಿದ್ದಾರೆ. ಈ ಬಾರಿ ಅವರು ಗಾಂಜಾ ಸೇವಿಸಿದರೆ ವಾಹನ ಚಾಲನೆ ಮಾಡದಂತೆ ವಿಶಿಷ್ಟ ರೀತಿಯಲ್ಲಿ ಸೂಚನೆ ನೀಡಿದ್ದಾರೆ.

ಫುಡ್ ಡೆಲಿವರಿ ದೈತ್ಯ ಜೊಮ್ಯಾಟೊ ಟ್ವೀಟ್‌ನಲ್ಲಿ ಹಂಚಿಕೊಂಡ ವಿಡಿಯೋದ ಬಳಿಕ ಪೊಲೀಸರು ಈ ವಿಡಿಯೋ ಶೇರ್​ ಮಾಡಿದ್ದಾರೆ. ಶುಭಂ ಎಂಬ ವ್ಯಕ್ತಿ ಪದೇ ಪದೇ ಗಾಂಜಾ ಸರಬರಾಜು ಮಾಡುವಂತೆ ಜೊಮ್ಯಾಟೊಗೆ ಕೇಳುತ್ತಿರುವುದನ್ನು ಕಂಪೆನಿ ಟ್ವಿಟರ್​ನಲ್ಲಿ ಶೇರ್​ ಮಾಡಿತ್ತು.

ಇದನ್ನು ಉಲ್ಲೇಖಿಸಿರುವ ಪೊಲೀಸರು ಗಾಂಜಾ ಸೇವಿಸಿದರೆ ವಾಹನ ಚಾಲನೆ ಮಾಡದಂತೆ ವಿಶಿಷ್ಟ ರೀತಿಯಲ್ಲಿ ಸೂಚನೆ ನೀಡಿದ್ದಾರೆ. ‘ಯಾರಾದರೂ ಶುಭಂ ಅವರನ್ನು ಭೇಟಿಯಾದರೆ, ಅವರು ಗಾಂಜಾ ಸೇವಿಸಿ ವಾಹನ ಚಲಾಯಿಸಬೇಡಿ ಎಂದು ಹೇಳಿ’ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...