ಒಬ್ಬ ವ್ಯಕ್ತಿಯು ಅಸಾಮಾನ್ಯ ವಿನಂತಿಯನ್ನು ಮಾಡಿದಾಗ ಹೋಟೆಲ್‌ನ ಸಿಬ್ಬಂದಿ ಹೇಗೆ ನಿರಾಶೆಗೊಳಿಸಲಿಲ್ಲ ಎಂಬುದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಗ್ರಾಹಕನ ವಿಚಿತ್ರ ಬೇಡಿಕೆಯನ್ನು ಈಡೇರಿಸಿದ್ದಾರೆ.
ಟಿಕ್‌ಟೋಕರ್ ಥಾಮಸ್ ಎಂಬುವವರು ಮೆಲ್ಬೋರ್ನ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಎರಡು ದಿನಗಳ ಕಾಲ ತಂಗಲು ತೆರಳಿದ್ದರು. ಹೋಟೆಲ್ ಗೆ ಹೋಗುವ ಮುನ್ನ ಅವರು ಅಲ್ಲಿನ ಸಿಬ್ಬಂದಿಗೆ ಈಮೇಲ್ ಕಳುಹಿಸಿದ್ದರು. ಅದೇನೆಂದರೆ ಅವರು ಉಳಿದುಕೊಳ್ಳಲಿರುವ ಕೋಣೆಯಲ್ಲಿ ಸೇಬನ್ನು ಬಚ್ಚಿಡುವುದು..!
“ನಮಸ್ಕಾರ, ನಾನು 31/10 ಗುರುವಾರದಿಂದ 02/11 ಶನಿವಾರದವರೆಗೆ ಎರಡು ರಾತ್ರಿ ನಿಮ್ಮೊಂದಿಗೆ ಇರುತ್ತೇನೆ ಮತ್ತು ನಾನು ಏನನ್ನಾದರೂ ಕೇಳಬಹುದೇ ಎಂದು ಆಶ್ಚರ್ಯ ಪಡುತ್ತಿದ್ದೆ. ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ, ದಯವಿಟ್ಟು ಎಲ್ಲೋ ಒಂದು ಕಡೆ ಸೇಬನ್ನು ಅಡಗಿಸಬಹುದೇ ? ನನಗೆ ಹುಡುಕಲು ಜಾಗವಿದೆಯೇ ? ನಾನು ಆಗಾಗ್ಗೆ ಪ್ರಯಾಣ ಮಾಡುತ್ತೇನೆ ಮತ್ತು ಈ ಸಣ್ಣ ಆಟಗಳು ನನ್ನ ಮನಸ್ಸಿನ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಅವರು ಇಮೇಲ್‌ನಲ್ಲಿ ಬರೆದಿದ್ದಾರೆ.
ಕುಡಿದ ಅಮಲಿನಲ್ಲಿ ಮಾಜಿ ಪ್ರಿಯಕರನ ಮನೆಗೆ ನುಗ್ಗಿ ಧ್ವಂಸ ಮಾಡಿದ ಮಹಿಳೆ
ಥಾಮಸ್ ಹೋಟೆಲ್‌ಗೆ ಬಂದಾಗ, ಸ್ವಾಗತಕಾರರು ಅವನ ಹೆಸರನ್ನು ನೋಡಿ ನಕ್ಕು, ಹಾಗಾದರೆ ನೀವು ಆಪಲ್ ವ್ಯಕ್ತಿ ? ಎಂದು ಕೇಳಿದ್ದಾರೆ. ಕೋಣೆಯಲ್ಲಿ ಐದು ಸೇಬುಗಳನ್ನು ಬಚ್ಚಿಡಲಾಗಿದೆ ಎಂದು ತಿಳಿಸಿದ್ದಾರೆ.
ಹೋಟೆಲಿನ ರೂಂಗೆ ಬಂದ ಥಾಮಸ್ ಸೇಬುಗಳನ್ನು ಹುಡುಕಿದ್ದಾರೆ. ನಾಲ್ಕು ಸೇಬುಗಳನ್ನು ಸುಲಭವಾಗಿ ಹುಡುಕಿದ್ದಾರೆ. ಆದರೆ 5ನೆಯ ಸೇಬು ಬೇಗ ಸಿಗಲಿಲ್ಲ. ನಂತರ ಮರುದಿನ ಬೆಳಗ್ಗೆ ಎದ್ದು ಸೇಬನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಗ್ರಾಹಕನ ವಿನಂತಿಯನ್ನು ಪೂರೈಸಿದ ಹೋಟೆಲ್ ಸಿಬ್ಬಂದಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, ಇದು ಉತ್ತಮ ಗ್ರಾಹಕ ಸೇವೆ ಎಂದು ಹೇಳಿದ್ದರೆ, ಇನ್ನೊಬ್ಬರು ಉಚಿತ ತಿಂಡಿಗಳನ್ನು ಪಡೆಯಲು ಉತ್ತಮ ಮಾರ್ಗ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.