alex Certify ಸ್ಟಂಟ್ ಮಾಡಿ ಕಂಬಿ ಎಣಿಸುತ್ತಿರುವ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಂಟ್ ಮಾಡಿ ಕಂಬಿ ಎಣಿಸುತ್ತಿರುವ ಯುವಕ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹೀಂದ್ರ ಥಾರ್ ಜೀಪಿನಲ್ಲಿ ಸ್ಟಂಟ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಯುವಕ ನೋಯ್ಡಾದ ರಸ್ತೆಯಲ್ಲಿ ಥಾರ್ ಜೀಪ್ ಚಲಾಯಿಸುತ್ತಲೇ ಕಿಟಕಿಯಿಂದ ತಲೆಯನ್ನು ಹೊರಹಾಕಿ ಬೇಸ್ ಬಾಲ್ ಬ್ಯಾಟ್ ಅನ್ನು ತೋರಿಸುತ್ತಾ ದರ್ಪ ತೋರಿದ್ದ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ಯುವಕನನ್ನು ಬಂಧಿಸಿ, ಜೀಪನ್ನು ಜಪ್ತಿ ಮಾಡಿದ್ದಾರೆ.

ಆಟಕ್ಕೆ ಕುತ್ತು ತಂದಿಟ್ಟ `ಮುಟ್ಟು’…….!

ಈ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಪೊಲೀಸರು `ನೀವು ರಸ್ತೆಯಲ್ಲಿ ಸ್ಟಂಟ್ ಮಾಡಿದರೆ ನಿಮ್ಮನ್ನು ನಾವು ಪತ್ತೆ ಮಾಡುತ್ತೇವೆ. ವಾಹನವನ್ನು ಜಪ್ತಿ ಮಾಡುತ್ತೇವೆ ಮತ್ತು ನಿಮ್ಮನ್ನು ಲಾಕಪ್ ನಲ್ಲಿ ಕೂಡಿ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಬಂಧಿತ ಯುವಕ ತಪ್ಪೊಪ್ಪಿಕೊಂಡಿದ್ದು, ಇನ್ನೆಂದೂ ಇಂತಹ ಕೃತ್ಯವನ್ನು ಮಾಡುವುದಿಲ್ಲ ಎಂದು ಹೇಳಿದ್ದಾನಾದರೂ, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

https://twitter.com/Rvpandit001/status/1530822987074588672?ref_src=twsrc%5Etfw%7Ctwcamp%5Etweetembed%7Ctwterm%5E1530822987074588672%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-arrested-for-performing-dangerous-stunt-on-noida-road-up-police-shares-video-1956327-2022-05-31

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...