ಸಿಂಗಾಪುರ: ಕೋವಿಡ್-19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ಬಳಿಕ ಹೊರಗೆ ಹೋಗುವಾಗ ಎಲ್ಲರೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ವಿಶ್ವದ ಹಲವು ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಬಗ್ಗೆ ಇನ್ನೂ ಕಠಿಣ ನಿಯಮಗಳಿವೆ. ಹಾಗೆಯೇ ಸಿಂಗಾಪುರ ಕೂಡ ಮಾಸ್ಕ್ ಬಗ್ಗೆ ಇನ್ನೂ ಕಠಿಣ ನಿಯಮಗಳನ್ನು ಹಾಕುತ್ತಿವೆ.
ಫೇಸ್ ಮಾಸ್ಕ್ ಹಾಕದ ವ್ಯಕ್ತಿಗೆ ಯಾವ ಶಿಕ್ಷೆ ನೀಡಲಾಯಿತು ಗೊತ್ತಾ..?
ಬ್ರಿಟೀಷ್ ಪ್ರಜೆ ಬೆಂಜಮಿನ್ ಗ್ಲಿನ್ ಎಂಬಾತನಿಗೆ ಈ ಫೇಸ್ ಮಾಸ್ಕ್ ಬಗ್ಗೆ ನಂಬಿಕೆ ಇಲ್ಲವಂತೆ. ಹೀಗಾಗಿ ಈತ ಮೇ ತಿಂಗಳಲ್ಲಿ ಸಿಂಗಾಪುರದ ತನ್ನ ಕಚೇರಿಗೆ ರೈಲಿನಲ್ಲಿ ಹೋಗುವಾಗ ಮಾಸ್ಕ್ ಧರಿಸದಿರಲು ನಿರ್ಧರಿಸಿದ್ದ. ಈ ವೇಳೆ, ಸಹಪ್ರಯಾಣಿಕರೊಬ್ಬರು ಆತನನ್ನು ರಹಸ್ಯವಾಗಿ ಚಿತ್ರೀಕರಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
BIG NEWS: ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ….? ಇಲ್ಲಿದೆ ಮಾಹಿತಿ
ರೈಲು ಪ್ರಯಾಣದ ಕೆಲವೇ ಗಂಟೆಗಳ ನಂತರ, ಈತನನ್ನು ಬಂಧಿಸಲಾಯಿತು ಮತ್ತು ನಾಲ್ಕು ಅಪರಾಧಗಳ ಆರೋಪ ಹೊರಿಸಲಾಯಿತು. ವರದಿಗಳ ಪ್ರಕಾರ ಗ್ಲಿನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಆತನನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು.
ಆದಾಗ್ಯೂ, ಗ್ಲಿನ್ ತನ್ನ ವಿರುದ್ಧದ ಎಲ್ಲಾ ಆರೋಪಗಳು ಅಸಂಬದ್ಧ ಎಂದು ಹೇಳಿದರು ಹಾಗೂ ನ್ಯಾಯಾಲಯದ ವಿಚಾರಣೆಯನ್ನು ‘ಅಸಂಬದ್ಧ’ ಮತ್ತು ‘ಅಸಹ್ಯಕರ’ ಎಂದು ಕೆಂಡಕಾರಿದ್ದಾರೆ. “ಸಿಂಗಾಪುರದ ನ್ಯಾಯಾಂಗ ವ್ಯವಸ್ಥೆಯು ನನ್ನನ್ನು ಮತ್ತು ನನ್ನ ಕುಟುಂಬವನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದರ ಬಗ್ಗೆ ನನಗೆ ಅಸಹ್ಯವಿದೆ” ಎಂದು ಹೇಳಿದ್ದಾರೆ.
2017 ರಿಂದ ಸಿಂಗಾಪುರದಲ್ಲಿ ವಾಸಿಸುತ್ತಿರುವ ಗ್ಲಿನ್, ಬ್ರಿಟಿಷ್ ನೇಮಕಾತಿ ಕಂಪನಿಯ ಸಿಂಗಾಪುರ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.