ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸಗಾರರನ್ನು ವಜಾ ಮಾಡುವ ಸುದ್ದಿಗಳು ಇತ್ತಿಚೆಗೆ ಹೆಚ್ಚಾಗಿವೆ. ಇದಕ್ಕೆ ಕಾರಣ ರಿಸೆಶನ್, ಆರ್ಥಿಕ ಹಿಂಜರಿತ ಕಾರಣ ಕೊಟ್ಟು ಸಾವಿರಾರು ಜನರನ್ನ ಕೆಲಸದಿಂದ ತೆಗೆಯಲಾಗುತ್ತಿದೆ. ಕಂಪನಿಗಳ ಈ ಕ್ರಮದಿಂದಾಗಿ ಎಷ್ಟೋ ಜನರು ಬೀದಿಗೆ ಬಂದಿದ್ದಾರೆ. ಈಗ ಬರಿಸ್ತಾ ಕಂಪನಿಯ ಸ್ಟಾರ್ ಬಕ್ಸ್ ನಲ್ಲಿ ಕೆಲಸ ಮಾಡುತಿದ್ದ ವ್ಯಕಿಯೊಬ್ಬನನ್ನ ಕೆಲಸದಿಂದ ತೆಗೆದಿದೆ. ಇದಕ್ಕೆ ಕಾರಣ ಏನಂತ ಗೊತ್ತಾದೆ ನೀವು ಶಾಕ್ ಆಗಿ ಬಿಡ್ತಿರಾ.
ತನಗಾದ ಕಹಿ ಅನುಭವವನ್ನ ಈ ವ್ಯಕ್ತಿ ತನ್ನ @fugnarr ಅನ್ನೋ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾನೆ ಮತ್ತು ಅದಕ್ಕೆ “ಗುಡ್ ಬೈ ಸ್ಟಾರ್ ಬಕ್ಸ್, ಕೆಲಸಕ್ಕೆ ಬರಕೂಡದು ಎಂಬ ಸೂಚನೆ’ ಎಂದು ಶೀರ್ಷಿಕೆ ಕೊಡಲಾಗಿದೆ. ಅಸಲಿಗೆ ಈ ವ್ಯಕ್ತಿ ತನ್ನ ಲಂಚ್ ಬ್ರೇಕ್ ಸಮಯದಲ್ಲಿ, ತಾನು ತಂದಿದ್ದ ಊಟವನ್ನ ಅಲ್ಲೇ ಇದ್ದ ಕಂಪನಿಯ ಓವನ್ನಲ್ಲಿ ಬಿಸಿ ಮಾಡಿಕೊಳ್ಳುತ್ತಾನೆ. ಆತ ಮಾಡಿದ್ದು ಅದೇ ತಪ್ಪು. ಕಂಪನಿಯ ಓವನ್ ಬಳಸಿಕೊಂಡಿದ್ದಾನೆ ಅನ್ನೋ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆಯಲಾಗಿದೆ. ಜೊತೆಗೆ ಈ ಕ್ರಮಕ್ಕಾಗಿ ಕ್ಷಮೆಯನ್ನ ಕೂಡಾ ಕೇಳಿದೆ.
ಸೋಶಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ತಮಗೂ ಕೂಡಾ ಇದೇ ರೀತಿ ಆದ ಕಹಿ ಅನುಭವವನ್ನ ಕಾಮೆಂಟ್ ಬಾಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ಈ ವ್ಯಕ್ತಿಗೆ ಸಮಾಧಾನ ಮಾಡಿದ್ದಾರೆ. ಹಾಗೆಯೇ ಕೆಲ ಸಲಹೆಗಳನ್ನು ಕೂಡಾ ಕೊಟ್ಟಿದ್ದಾರೆ.
ಒಬ್ಬರು, ನಾನು ಕೂಡಾ ಈ ಹಿಂದೆ ಸ್ಮಾರ್ಬಕ್ಸ್ನಲ್ಲಿ ಕೆಲಸ ಮಾಡುತ್ತಿದ್ದೆ. ನನಗೂ ಕೂಡಾ ಕ್ಷುಲ್ಲಕ ಕಾರಣಕ್ಕೆ ಕೆಲಸದಿಂದ ತೆಗೆದಿದ್ದರು’ ಎಂದು ಹೇಳಿದ್ದಾರೆ. ಇನ್ನೊಬ್ಬರು “ಈ ಸಮಯದಲ್ಲಿ ಧೈರ್ಯದಿಂದ ಇರಿ” ಎಂದು ಹೇಳಿದ್ದಾರೆ. ‘ದೊಡ್ಡ ದೊಡ್ಡ ಕಂಪನಿಗಳಲ್ಲಿ ಮನುಷ್ಯರ ಕಷ್ಟಗಳಿಗೆ ಬೆಲೆ ಇಲ್ಲ’ ಎಂದು ಮಗದೊಬ್ಬರು ಹೇಳಿದ್ದಾರೆ.