ವಿಶ್ವದ ಯಾವುದೇ ಮೂಲೆಗೆ ಹೋದರೂ ಭಾರತೀಯರು ತಮ್ಮಿಷ್ಟದ ಖಾದ್ಯವನ್ನ ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗ್ತಾರೆ, ದೇಶದಲ್ಲಿ ಅನ್ನವನ್ನ ವಿವಿಧ ಮಾದರಿಯ ಪದಾರ್ಥಗಳ ಜೊತೆ ತಿನ್ನಲಾಗುತ್ತದೆ.
ಕರಾವಳಿಯ ಭಾಗದ ಮೀನು ಸಾಂಬಾರ್ ಆಗಿರಲಿ, ಮಲೆನಾಡಿನ ತರಕಾರಿಯಿಂದ ತಯಾರಾದ ಸಾಂಬಾರೇ ಆಗಿರಲಿ ಅನ್ನ ಯಾವುದರ ಜೊತೆ ಬೇಕಿದ್ರೂ ಹೊಂದಿಕೊಂಡು ಒಂದು ಅದ್ಭುತ ರುಚಿಯನ್ನೇ ನೀಡುತ್ತದೆ. ಆದರೆ, ಇದೇ ಅನ್ನಕ್ಕೆ ಅಪಮಾನ ಮಾಡಿದ್ರಿ ಅಂದರೆ ಭಾರತೀಯರ ಕೋಪವನ್ನೂ ಎದುರಿಸಬೇಕಾಗುತ್ತದೆ
ಓರ್ವ ವಿದೇಶಿ ವ್ಯಕ್ತಿ ಕೂಡ ಇಂತದ್ದೇ ಒಂದು ಕೆಲಸ ಮಾಡಿದ್ದಾರೆ. ಈ ವ್ಯಕ್ತಿ ಅನ್ನವನ್ನ ಕೈಯಲ್ಲಿ ತಿನ್ನೋದನ್ನ ಬಿಟ್ಟು ಫೋರ್ಕ್ನಲ್ಲಿ ತಿನ್ನುವ ಪ್ರಯತ್ನ ಮಾಡಿದ್ದಾರೆ. ಈ ಟ್ವೀಟ್ನ್ನು ದಿ ರಾಯಲ್ ಬಟ್ಲರ್ ಎಂಬವರು ಶೇರ್ ಮಾಡಿದ್ದಾರೆ . ಲೇಡಿಸ್ & ಜಂಟಲ್ಮೆನ್ ನೆನಪಿಡಿ ನಾವು ಯಾವಾಗಲೂ ಚಾಕು ಇಲ್ಲವೇ ಫೋರ್ಕ್ ಹಾಗೂ ಚಾಪ್ಸ್ಟಿಕ್ಗಳನ್ನ ಬಳಸಿ ಅನ್ನವನ್ನ ತಿನ್ನುತ್ತೇವೆ. ಸಾಮಾನ್ಯವಾಗಿ ನಾವು ನಮ್ಮ ಕೈ ಹಾಗೂ ಬೆರಳುಗಳನ್ನ ಬಳಕೆ ಮಾಡೋದಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ. ಇದು ಭಾರತೀಯರ ಕಣ್ಣು ಕೆಂಪಗಾಗಿಸಿದ್ದು ಅನ್ನ ತಿನ್ನೋದು ಹೇಗೆ ಎಂದು ನೀನು ನಮಗೆ ಕಲಿಸಬೇಡ ಅಂತಾ ಕಮೆಂಟ್ ಮಾಡ್ತಿದ್ದಾರೆ.