ಅಮೃತಸರದ ಸ್ವರ್ಣ ಮಂದಿರ ಪಾವಿತ್ರ‍್ಯತೆಗೆ ಧಕ್ಕೆ ತರಲು ನೋಡಿದ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸಿಟ್ಟಿಗೆದ್ದ ಸಮೂಹವೊಂದು ಕಲ್ಲು ತೂರಿ ಸಾಯಿಸಿದ ಘಟನೆ ಶನಿವಾರ ಸಂಜೆ ಜರುಗಿದೆ.
ಸ್ವರ್ಣ ಮಂದಿರದ ದರ್ಬಾರ್ ಸಾಹಿಬ್‌ನಲ್ಲಿ ಇಟ್ಟಿದ್ದ ಕರ್ಪನ್ (ಖಡ್ಗ) ಎತ್ತಿಕೊಳ್ಳಲು ನೋಡಿದ ಬಳಿಕ ಆತನ ಮೇಲೆ ಜನರು ಹೀಗೆ ಮುಗಿಬಿದ್ದಿದ್ದಾರೆ ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ಅಧ್ಯಕ್ಷರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ನಿವಾಸಿ ಎನ್ನಲಾದ ಈ ವ್ಯಕ್ತಿ ಗುರು ಗ್ರಂಥ್ ಸಾಹಿಬ್ ಇಟ್ಟಿರುವ ಜಾಗಕ್ಕೆ ಹಾಕಿರುವ ಲೋಹದ ಗ್ರಿಲ್‌ಗಳನ್ನು ನೆಗೆದು ದಾಟಿ, ಗ್ರಂಥದ ಎದುರು ಇಟ್ಟಿದ್ದ ಕಿರ್ಪನ್ ಅನ್ನು ಎತ್ತುಕೊಳ್ಳಲು ನೋಡಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟಿವಿಗಳಲ್ಲೂ ಬಿತ್ತರಗೊಂಡಿದೆ.
ಸಹಾಯಕ ಪ್ರಾಧ್ಯಾಪಕರಾಗುವ ನಿರೀಕ್ಷೆಯಲ್ಲಿದ್ದವರಿಗೆ ಕೊನೆ ಕ್ಷಣದಲ್ಲಿ ಬಿಗ್ ಶಾಕ್
ಈ ಪ್ರಯತ್ನಕ್ಕೆ ಮುಂದಾಗುತ್ತಲೇ ಆತನನ್ನು ಬಂಧನಕ್ಕೆ ಪಡೆದ ಎಸ್‌ಜಿಪಿಸಿ ತನ್ನ ಮುಖ್ಯ ಕಚೇರಿಗೆ ಆತನನ್ನು ಕೊಂಡೊಯ್ದಿದೆ. ಇದಾದ ಬಳಿಕ ಸಂಘಟ್ ಮಂದಿಯೊಂದಿಗೆ ನಡೆದ ತಿಕ್ಕಾಟದಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಡಿಸಿಪಿ ಪರ್ಮೀಂದರ್ ಸಿಂಗ್ ತಿಳಿಸಿದ್ದಾರೆ.
https://twitter.com/kamalsinghbrar/status/1472202936860045316?ref_src=twsrc%5Etfw%7Ctwcamp%5Etweetembed%7Ctwterm%5E1472202936860045316%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fnews%2Findia%2Fbreaking-man-accused-of-sacrilege-attempt-at-amritsars-golden-temple-beaten-to-death-5145000%2F