ವ್ಯಕ್ತಿಯೊಬ್ಬ ಅರೆ ನಿದ್ರೆಯಲ್ಲಿರುವಾಗ ಆತನಿಗೆ ಮಾಂಸದಡುಗೆಗಾಗಿ ಮೇಕೆಯನ್ನು ಕತ್ತರಿಸುತ್ತಿರುವಂತೆ ಕನಸು ಬಿದ್ದಿದ್ದು, ಇದೇ ಗುಂಗಿನಲ್ಲಿ ಚಾಕುವಿನಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆ ಘಾನಾದಲ್ಲಿ ನಡೆದಿದೆ.
ಆಗಸ್ಟ್ 12ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೊಫಿ ಆಟ್ಟಾ ಎಂಬಾತ ಕುರ್ಚಿಯಲ್ಲಿ ಕುಳಿತು ಅರೆ ನಿದ್ರೆಯಲ್ಲಿ ಇದ್ದ. ಈ ವೇಳೆ ಆತನಿಗೆ ಮೇಕೆ ಕತ್ತರಿಸುವ ಕನಸು ಬಿದ್ದಿದೆ. ಇದೇ ಗುಂಗಿನಲ್ಲಿ ಅಡುಗೆ ಮನೆಗೆ ತೆರಳಿ ಚಾಕು ತೆಗೆದುಕೊಂಡು ಬಂದು ತನ್ನ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ.
ಆತನ ಕಿರುಚಾಟ ಕೇಳಿ ಅಕ್ಕಪಕ್ಕದವರು ಓಡಿ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೊಫಿ ಆಟ್ಟಾನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ನಡೆದ ವೇಳೆ ಆತನ ಪತ್ನಿ ಪ್ರಯಾಣ ಮಾಡುತ್ತಿದ್ದಳು ಎನ್ನಲಾಗಿದ್ದು, ನೆರೆಹೊರೆಯವರು ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ವೈದ್ಯರು ಕೂಡ ಈತ ಹೇಳಿದ ಕಥೆ ಕೇಳಿ ಅಚ್ಚರಿಗೊಳಗಾಗಿದ್ದಾರೆ. ಕತ್ತರಿಸಿಕೊಂಡಿರುವ ಮರ್ಮಾಂಗವನ್ನು ಮರುಜೋಡಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಈ ಪ್ರಕರಣ ನಿದ್ರೆಯಲ್ಲಿ ಕನಸು ಕಾಣುವವರಿಗೆ ಎಚ್ಚರಿಕೆಯ ಗಂಟೆಯಂತಿದೆ.
https://twitter.com/Serwaa_Amihere/status/1559203103487959053?ref_src=twsrc%5Etfw%7Ctwcamp%5Etweetembed%7Ctwterm%5E1559203103487959053%7Ctwgr%5Ee813996be4aea4ded172da83372035c5983f6be3%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftimesnownewsenglish-epaper-tnneng%2Fmanaccidentallychopsoffhisownpeniswhiledreamingaboutslaughteringgoat-newsid-n415753100%3Fs%3Dauu%3D0x61fbe37283098391ss%3Dwsp