ಸೊಸೆಯಿಂದ ಹಲ್ಲೆಗೊಳಗಾದ ಹಿರಿಯ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿಯಲ್ಲಿ ಜರುಗಿದೆ.
ರಾಮ್ಲಾಲ್ ಮೇಘ್ವಾಲ್ ಎಂಬ 60ರ ಈ ವ್ಯಕ್ತಿಯ ತಲೆ ಮೇಲೆ ಅವರ ಸೊಸೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ, ಆಸ್ಪತ್ರೆಯ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಹಿತ್- ಕೊಹ್ಲಿ ಮಧ್ಯೆ ಮುಂದುವರೆದ ಮುನಿಸು…..? ಮಗಳ ಹುಟ್ಟುಹಬ್ಬದ ಹೆಸರಿನಲ್ಲಿ ಏಕದಿನ ತಂಡದಿಂದ ಹೊರ ಬಿದ್ದ ವಿರಾಟ್
ಬುಂದಿ ಬಳಿಯ ಅಂತ್ರಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ತಮ್ಮ ಮಗ ಮನೆಯಲ್ಲಿ ಇಲ್ಲದ ವೇಳೆ ಸೊಸೆಯೊಂದಿಗೆ ಜಗಳ ನಡೆದು, ಆ ವೇಳೆ, 30 ವರ್ಷ ವಯಸ್ಸಿನ ತಮ್ಮ ಸೊಸೆ ಕೈಯಿಂದ ಕೋಲಿನಲ್ಲಿ ತಲೆ ಮೇಲೆ ಪೆಟ್ಟು ತಿಂದಿದ್ದಾರೆ ರಾಮ್ಲಾಲ್. ಈ ವೇಳೆ ರಾಮ್ಲಾಲ್ಗೆ ತೀವ್ರ ಗಾಯಗಳಾಗಿವೆ. ಮನೆಗೆ ಬಂದ ಮಗನಿಗೆ ಮೊಮ್ಮಕ್ಕಳು ನಡೆದ ಘಟನೆ ವಿವರಿಸಿದ್ದಾರೆ.
ರಾಮ್ಲಾಲ್ ಪುತ್ರ ಸತ್ಯನಾರಾಯಣ್ ಮೇಘ್ವಾಲ್ನ ಮಡದಿ ಧನ್ನಿಬಾಯಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಧನ್ನಿಬಾಯಿಯನ್ನು ಪ್ರಕರಣದ ಸಂಬಂಧ ತನಿಖೆ ನಡೆಸಲು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.