ಕಳ್ಳತನ ಮಾಡಿದ್ದಾನೆಂದು 45 ವರ್ಷದ ವ್ಯಕ್ತಿಯೊಬ್ಬನ ಮೇಲೆ ಎರಗಿದ ಗ್ರಾಮಸ್ಥರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಕಾಲುಗಳನ್ನು ಹಗ್ಗದಿಂದ ಟ್ರಕ್ವೊಂದಕ್ಕೆ ಕಟ್ಟಿ ರಸ್ತೆ ಮೇಲೆಯೇ ಎಳೆದುಕೊಂಡು ಹೋಗಿದ್ದಾರೆ.
ಅತ್ಯಾಚಾರ ಆರೋಪಿ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ; ಸಿಐಡಿಗೆ ವರ್ಗಾವಣೆ
ತೀವ್ರವಾಗಿ ಗಾಯಗೊಂಡು, ರಕ್ತಸ್ರಾವದಿಂದ ತತ್ತರಿಸಿದ ಆ ವ್ಯಕ್ತಿ ಕೊನೆಗೆ ಮೃತಪಟ್ಟಿದ್ದಾನೆ. ಇಂಥ ದಾರುಣ ಘಟನೆ ಮಧ್ಯಪ್ರದೇಶದ ಜೆಟಿಯಾ ಗ್ರಾಮದಲ್ಲಿ ನಡೆದಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮೂಹಿಕ ಥಳಿತ ಮತ್ತು ಚಿತ್ರಹಿಂಸೆಯಿಂದ ಸತ್ತ ವ್ಯಕ್ತಿಯನ್ನು ಕನ್ಹಯ್ಯಾ ಭೀಲ್ ಎಂದು ಗುರುತಿಸಲಾಗಿದೆ. ಆತ ಆದಿವಾಸಿ ಎಂದು ತಿಳಿದುಬಂದಿದ್ದು, ಪೊಲೀಸರು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದಾರೆ.