alex Certify ಪತಿ ಗೆಳೆಯನ ಜೊತೆ ಪತ್ನಿ ಲಿವ್ ಇನ್: ಹತ್ಯೆಗೈದವನನ್ನು ಬಂಧಿಸಿದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಗೆಳೆಯನ ಜೊತೆ ಪತ್ನಿ ಲಿವ್ ಇನ್: ಹತ್ಯೆಗೈದವನನ್ನು ಬಂಧಿಸಿದ ಪೊಲೀಸ್

ಇದು ಗಂಡ –ಹೆಂಡತಿ ಮತ್ತು ಆಕೆಯ ಗೆಳೆಯನ ಕಥೆ. ಕೆಲವು ವರ್ಷಗಳ ಹಿಂದೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು. ಆ ಕಾರಣದಿಂದ ಹೆಂಡತಿ ಗಂಡನಿಂದ ಬೇರೆಯಾಗಿದ್ದಳು. ಆಗ ಆಕೆಯ ಜೀವನದಲ್ಲಿ ಬಂದಿದ್ದೇ ಆತ. ಆಕೆ ಮತ್ತು ಆತ ಇಬ್ಬರೂ ಕಳೆದ ಆರು ತಿಂಗಳಿನಿಂದ ಲಿವ್‌ ಇನ್‌ ಪಾರ್ಟನರ್‌ ಆಗಿ ಒಟ್ಟಿಗೆ ವಾಸಿಸುತ್ತಿದ್ದರು. ಹೆಂಡತಿ ತನ್ನನ್ನ ಬಿಟ್ಟು ಬೇರೆಯವರ ಜೊತೆಗೆ ಇರುವುದನ್ನ ಸಹಿಸದ ಗಂಡ, ಆ ಗೆಳೆಯನ ಮೇಲೆ ಚಾಕುವಿನಿಂದ ಅಟ್ಯಾಕ್‌ ಮಾಡಿದ್ದಾನೆ. ಈ ಘಟನೆ ನಡೆದಿರೋದು ದೆಹಲಿಯ ಸದರ್ ಬಜಾರ್‌ ಕಾಲೋನಿಯಲ್ಲಿ.

ದೆಹಲಿ ಪೊಲೀಸರು ಹತ್ಯೆಯ ಆರೋಪದಲ್ಲಿ 32 ವರ್ಷದ ರಾಬಿನ್‌ನನ್ನ ಬಂಧಿಸಿದ್ದಾರೆ. ರಾಬಿನ್‌ ಅನ್ನೋ ಈ ವ್ಯಕ್ತಿಯ ಮೇಲೆ ಕಳ್ಳತನ, ದರೋಡೆ, ಲೂಟಿ, ಹೊಡೆದಾಟದ ಪ್ರಕರಣಗಳು ಪೊಲೀಸರು ಈ ಹಿಂದೆಯೆ ದಾಖಲಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ ಇದೇ ತಿಂಗಳು 9ರಂದು ಸದರ್ ಬಜಾರ್‌ ಪೊಲೀಸ್‌ ಸ್ಟೇಷನ್‌ಗೆ ಒಂದು ಅನಾಮಧೇಯ ಕರೆ ಬಂದಿದೆ. ಆ ಕರೆ ಓರ್ವ ವ್ಯಕ್ತಿಗೆ ಚಾಕು ಚುಚ್ಚಿರೋ ಮಾಹಿತಿ ಕೊಡುತ್ತೆ. ಆ ತಕ್ಷಣವೇ ಕಾರ್ಯಪ್ರವೃತರಾಗಿರೋ ಪೊಲೀಸರು ಘಟನಾ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ನಿಜವಾಗಿಯೂ ಓರ್ವ ವ್ಯಕ್ತಿ ಅಂದರೆ ಕುಣಾಲ್‌ ಗೆ ಚಾಕುವಿನಿಂದ ಚುಚ್ಚಿ ಸಾಯಿಸಿರುತ್ತಾರೆ.

ಘಟನೆಯ ತನಿಖೆ ಆರಂಭಿಸಿದ ನಂತರ ಪೊಲೀಸರಿಗೆ ಗಮನಕ್ಕೆ ಬಂದಿರೋ ವಿಚಾರ ಏನಂದರೆ, ಹತ್ಯೆಗೊಳಗಾದ ವ್ಯಕ್ತಿಯ ಜೊತೆಗಿದ್ದ ಮಹಿಳೆ ಈ ಘಟನೆ ನಡೆದಿದ್ದನ್ನ ಕಣ್ಣಾರೆ ನೋಡಿದ್ದಾಳೆ. ಆ ನಂತರ ಹೇಳಿಕೆ ಕೊಟ್ಟ ಆಕೆ, ಕೊಲೆ ಮಾಡಿರೋ ವ್ಯಕ್ತಿ ಬೇರಾರು ಅಲ್ಲ ತನ್ನ ಪತಿ ಎಂದು ಹೇಳಿದ್ದಾಳೆ.

ಅಷ್ಟೆ ಅಲ್ಲ ತನ್ನ ವೈವಾಹಿಕ ಜೀವನ ಸಮಸ್ಯೆಗಳಿಂದ ಕೂಡಿದ್ದು ಗಂಡ ರಾಬಿನ್‌ ಜೊತೆ ಬದುಕುವುದು ಅಸಾಧ್ಯವಾಗಿತ್ತು. ತಾನು ಕಳೆದ 6 ತಿಂಗಳಿನಿಂದ ಕುಣಾಲ್‌ ಜೊತೆಗೆ ಇರುವುದಾಗಿಯೂ ಆಕೆ ಹೇಳಿಕೊಳ್ಳುತ್ತಾಳೆ. ಇದೇ ತಿಂಗಳ 8ರಂದು 11.45ರ ಸಮಯದಲ್ಲಿ ಗೆಳೆಯ ಕುಣಾಲ್‌ ಜೊತೆಗೆ ಆಕೆ ಮನೆಗೆ ಹೋಗುತ್ತಿದ್ದಳು. ಅದೇ ಸಮಯದಲ್ಲಿ ಗಂಡ ರಾಬಿನ್, ಕುಣಾಲ್‌ಗೆ ಪದೇ ಪದೇ ಚಾಕು ಚುಚ್ಚಿ ಸಾಯಿಸಿದ್ದಾನೆ. ಚಾಕು ಚುಚ್ಚಿ ಓಡಿ ಹೋದ ನಂತರ ಅಲ್ಲಿಂದ ಎಸ್ಕೇಪ್‌ ಆಗಿದ್ದ ರಾಬಿನ್‌. ಕೊನೆಗೆ ಪೊಲೀಸರು ಆತನನ್ನ ಹುಡುಕಿ ಬಂಧಿಸಿದ್ದಾರೆ.

ಆರೋಪಿ ರಾಬಿನ್ ಬಂಧನದ ನಂತರ ಕೆಲವು ವಿಷಯಗಳನ್ನ ಪೊಲೀಸರಿಗೆ ಹೇಳಿದ್ದ ‘ ನಾನು ಮತ್ತು ಕುಣಾಲ್‌ ಒಳ್ಳೆಯ ಸ್ನೇಹಿತರಾಗಿದ್ದೆವು. ಈ ಹಿಂದೆ ನಾನು ಬೇರೆ ಅಪರಾಧಗಳಿಗಾಗಿ ಜೈಲಿನಲ್ಲಿ ಇದ್ದಾಗ ಇಬ್ಬರೂ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಾರೆ ಅಂತ ಹೇಳಿದ್ದಾನೆ. ಇದನ್ನ ಸಹಿಸಲಾಗದೇ ತಾನು ಈ ಕೃತ್ಯ ಮಾಡಿರೋದಾಗಿ ಹೇಳಿದ್ದಾನೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ ಅಂತ ಡಿಸಿಪಿ ಸಾಗರ್‌ ಸಿಂಗ್‌ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...