
ಈಗ ಆಕೆಗೆ 50 ವರ್ಷ. “ಆಶಿಕ್ ಆವಾರಾ”, “ವಕ್ತ್ ಹಮಾರಾ ಹೈ”, “ಕ್ರಾಂತಿವೀರ್”, “ಕರಣ್ ಅರ್ಜುನ್”, “ಸಬ್ಸೆ ಬಡಾ ಕಿಲಾಡಿ”, “ಆಂದೋಲನ್” ಮತ್ತು ಹಲವು ಚಿತ್ರಗಳಿಗೆ ಅವರು ಹೆಸರುವಾಸಿಯಾಗಿದ್ದರು.
ಕೆಲವು ಅಭಿಮಾನಿಗಳು ಮಮತಾ ಅವರ ಇತ್ತೀಚಿನ ಸೌಂದರ್ಯ ಕಂಡುಖುಷಿಪಟ್ಟರೆ, ಇನ್ನು ಕೆಲವರು ನಟಿ ಎಷ್ಟೊಂದು ಬದಲಾಗಿದ್ದಾರೆ ಎಂದು ಶಾಕ್ ಆಗಿದ್ದಾರೆ.
90ರ ದಶಕದಲ್ಲಿ ಮಮತಾ ಕುಲಕರ್ಣಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರು. ವೃತ್ತಿಜೀವನದ ಉತ್ತುಂಗದಲ್ಲಿ ನಟಿ ಚಿತ್ರರಂಗ ತೊರೆದಾಗ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.
ಬಹಳಷ್ಟು ವರ್ಷಗಳ ನಂತರ ಮಮತಾ ತಮ್ಮ ಇತ್ತೀಚಿನ ಚಿತ್ರಗಳಿಂದ ಸುದ್ದಿ ಮಾಡುತ್ತಿದ್ದಾರೆ. ಅವರೀಗ ಇನ್ ಸ್ಟಾದಲ್ಲಿ ಕೆಲವು ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ಗುರುತಿಸಲಾಗದಂತೆ ಕಾಣುತ್ತಾರೆ
ಕೆಲವು ಅಭಿಮಾನಿಗಳು ಆಕೆಯನ್ನು ಮರಳಿ ಕಂಡು ಸಂತೋಷಪಟ್ಟರೆ, ಇನ್ನು ಕೆಲವರು ಕಾಮೆಂಟ್‌ಗಳ ವಿಭಾಗದಲ್ಲಿ ಆಕೆಯ ನೋಟದಲ್ಲಿನ ಬದಲಾವಣೆ ಬಗ್ಗೆ ತಿಳಿಸಿದ್ದಾರೆ.