alex Certify BIG NEWS: 25 ವರ್ಷಗಳ ನಂತರ ಮುಂಬೈಗೆ ಮರಳಿದ ನಟಿ ಮಮತಾ ಕುಲಕರ್ಣಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 25 ವರ್ಷಗಳ ನಂತರ ಮುಂಬೈಗೆ ಮರಳಿದ ನಟಿ ಮಮತಾ ಕುಲಕರ್ಣಿ….!

90 ರ ದಶಕದ ಜನಪ್ರಿಯ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಬರೋಬ್ಬರಿ 24 ವರ್ಷಗಳ ನಂತರ ಈಗ ಭಾರತದ ಮುಂಬೈಗೆ ಮರಳಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸೆಲ್ಫಿ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕ್ಲಿಪ್‌ನಲ್ಲಿ, ಮಾಜಿ ನಟಿ “ಹಾಯ್, ಇದು ಮಮತಾ ಕುಲಕರ್ಣಿ ಮತ್ತು ನಾನು 25 ವರ್ಷಗಳ ನಂತರ ಭಾರತ, ಅಮ್ಚಿ ಮುಂಬೈಗೆ ಬಂದಿದ್ದೇನೆ” ಎಂದಿದ್ದಾರೆ.

ನಾನು ಏರಿದ್ದ ವಿಮಾನ ಭಾರತದ ನೆಲದಲ್ಲಿ ಇಳಿಯುತ್ತಿದ್ದಂತೆ ಭಾವುಕಳಾದೆ ಎಂದು ಮಮತಾ ಕುಲಕರ್ಣಿ ಹೇಳಿಕೊಂಡಿದ್ದು, ಆ ಸಂದರ್ಭದಲ್ಲಿ ನನ್ನ ಕಣ್ಣಲ್ಲಿ ನೀರು ಬಂತು ಎಂದು ತಿಳಿಸಿದ್ದಾರೆ.

ಆದರೆ, ತಾನು ಭಾರತಕ್ಕೆ ಮರಳಿ ಬರಲು ಕಾರಣವೇನು ಎಂಬುದನ್ನು ಮಮತಾ ಕುಲಕರ್ಣಿ ಹೇಳಿಕೊಂಡಿಲ್ಲ. ಮಮತಾ ಕುಲಕರ್ಣಿ ಬಾಲಿವುಡ್‌ ಯಶಸ್ವಿ ಚಲನಚಿತ್ರಗಳಾದ ರಾಮ್ ಲಖನ್, ವಕ್ತ್ ಹಮಾರಾ ಹೈ, ಕ್ರಾಂತಿವೀರ್, ಕರಣ್ ಅರ್ಜುನ್, ಸಬ್ಸೆ ಬಡಾ ಖಿಲಾಡಿ, ಆಂದೋಲನ್ ಮತ್ತು ಬಾಜಿಗಳಲ್ಲಿ ಕಾಣಿಸಿಕೊಂಡಿದ್ದರು.

ಆಕೆಯ 1995 ರ ಚಲನಚಿತ್ರ “ಕರಣ್ ಅರ್ಜುನ್” ಆಗಿದ್ದು ಇದರಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಕಾಜೋಲ್ ನಟಿಸಿದ್ದಾರೆ.

ಇನ್ನು ಮಮತಾ ಕುಲಕರ್ಣಿ ಸಿಲುಕಿದ್ದ ವಿವಾದಗಳ ಬಗ್ಗೆ ಹೇಳುವುದಾದರೆ, 2016 ರಲ್ಲಿ, ಥಾಣೆ ಪೊಲೀಸರು ಅಂತರರಾಷ್ಟ್ರೀಯ ಮಾದಕವಸ್ತು ದರೋಡೆಕೋರರಿಗೆ ಅಕ್ರಮವಾಗಿ ಮೆಥಾಂಫೆಟಮೈನ್ ತಯಾರಿಕೆಗಾಗಿ ಎಫೆಡ್ರೆನ್ ಸರಬರಾಜು ಮಾಡಿದ ಆರೋಪಿಗಳಲ್ಲಿ ಇವರೂ ಒಬ್ಬರೆಂದು ಹೆಸರಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...