ಕೊಲ್ಕತ್ತಾ: ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ 18 ಸಾವಿರ ರೂ. ನೀಡಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಸತತ ಎರಡನೇ ದಿನವೂ ಒತ್ತಡ ಹೇರುತ್ತಿರುವ ಅವರು, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಚುನಾವಣೆ ಪ್ರಚಾರದ ವೇಳೆ ರೈತರಿಗೆ ನೀಡಿದ ಭರವಸೆಯಂತೆ ಪಿಎಂ ಕಿಸಾನ್ ಯೋಜನೆಯಡಿ 18 ಸಾವಿರ ರೂಪಾಯಿ ಕೊಡಬೇಕು ಎಂದು ಹೇಳಿದ್ದಾರೆ.
ರೈತರಿಗೆ ಬಾಕಿ 18 ಸಾವಿರ ರೂಪಾಯಿಗಳನ್ನು ಪಾವತಿಸುವುದಾಗಿ ಪ್ರಧಾನಿಯವರು ಭರವಸೆ ನೀಡಿದಂತೆ ಅರ್ಹ ರೈತರಿಗೆ ಬಾಕಿ ಇರುವ ಹಣ ನೀಡಬೇಕೆಂದು ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಯಾದ ಮೊದಲ ದಿನ ದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದ ಮಮತಾ ಬ್ಯಾನರ್ಜಿ ಎರಡನೇ ದಿನ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಬಾಕಿ ಇರುವ 18 ಸಾವಿರ ರೂ. ಬಿಡುಗಡೆಗೆ ಮನವಿ ಮಾಡಿದ್ದಾರೆ.
ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಬಂಗಾಳದ 75 ಲಕ್ಷ ರೈತರಿಗೆ ಒಂದೇ ಕಂತಿನಲ್ಲಿ 18,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ. 2020ರ ನವೆಂಬರ್ ರವರೆಗೆ ಬಂಗಾಳದಲ್ಲಿ 21.79 ಲಕ್ಷ ರೈತರು ಯೋಜನೆಗೆ ನೊಂದಾಯಿಸಿಕೊಂಡಿದ್ದು, ಅವರಿಗೆ ನೆರವು ನೀಡಬೇಕೆಂದು ಪತ್ರ ಬರೆಯಲಾಗಿದೆ.