ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಹರಿಹಾಯುವುದಕ್ಕೆ ಪ್ರಖ್ಯಾತರು. ಈ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ.
ಈಗ ಒಂದು ವಿಶಿಷ್ಟ ಕಾರಣಕ್ಕಾಗಿ ಅವರು ಸುದ್ದಿಯಲ್ಲಿದ್ದಾರೆ. ಡಾರ್ಜಿಲಿಂಗ್‌ಗೆ ತಮ್ಮ ಮೂರು ದಿನಗಳ ಭೇಟಿಯಲ್ಲಿರುವ ಮಮತಾ ರುಚಿಕರವಾದ ಪಾನಿ ಪುರಿಯನ್ನು ಜನರಿಗೆ ವಿತರಿಸಿರುವುದು ಕಂಡುಬಂದಿದೆ. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಜನಸಾಗರವೇ ಅಲ್ಲಿ ನೆರೆದಿತ್ತು.
ಮಮತಾ ಬ್ಯಾನರ್ಜಿ ಜುಲೈ 11ರಂದು ಡಾರ್ಜಿಲಿಂಗ್‌ಗೆ ಮೂರು ದಿನಗಳ ಭೇಟಿಯನ್ನು ಪ್ರಾರಂಭಿಸಿದರು. ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತಕ್ಕೆ (ಜಿಟಿಎ) ಹೊಸದಾಗಿ ಚುನಾಯಿತರಾದ 45 ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವುದು ಮುಖ್ಯ ಉದ್ದೇಶವಾಗಿತ್ತು.
ವರದಿಗಳ ಪ್ರಕಾರ ಪ್ರಮಾಣವಚನ ಸಮಾರಂಭದ ನಂತರ ಸಿಎಂ ಮಮತಾ ರಿಚ್ಮಂಡ್ ಹಿಲ್ ನಿಂದ ಡಾರ್ಜಿಲಿಂಗ್ ಮೃಗಾಲಯದ ಕಡೆಗೆ ತೆರಳಿದರು.
ದಾರಿಯಲ್ಲಿ ಸಾಗುವಾಗ ಪಾನಿಪುರಿ ಸ್ಟಾಲ್ ಕಂಡು, ಅಲ್ಲಿನ ಜನರಿಗೆ ತಾವು ಪಾನಿಪುರಿ ಬಡಿಸಲು ನಿರ್ಧರಿಸಿದ್ದಾರೆ. ‘ಪಾನಿ ಪುರಿ ವ್ಯಾಪಾರಿಯ ರೂಪದಲ್ಲಿ ಮಮತಾ ಅವರನ್ನು ನೋಡಿ ಸ್ಟಾಲ್ ಬಳಿ ಜನ ಜಮಾಯಿಸಿದರು.
ಪೂರಿಗೆ ಆಲೂ ಮಟರ್ ತುಂಬಿ ಪಾನಿ ಸೇರಿಸಿ ಅಲ್ಲಿ ನೆರೆದಿದ್ದ ಮಕ್ಕಳು ಮತ್ತು ಇತರರಿಗೆ ನೀಡಿದ್ದು ಕಾಣಿಸಿತು.